ಮುಲ್ಕಿ: ಮುಲ್ಕಿ ನ.ಪಂ. ಕಚೇರಿಯಲ್ಲಿ ದೀಪಾವಳಿ ಆಚರಣೆ ಸರಳವಾಗಿ ನಡೆಯಿತು.
ನೂತನ ಅಧ್ಯಕ್ಷ ಸುಭಾಷ್ ಶೆಟ್ಟಿ ಹಾಗೂ ಮುಖ್ಯಾಧಿಕಾರಿ ಚಂದ್ರ ಪೂಜಾರಿ ನೇತೃತ್ವದಲ್ಲಿವಾಹನ ಪೂಜೆ, ಕಾರ್ಯಾಲಯದಲ್ಲಿ ಪೂಜಾ ಕೈಂಕರ್ಯ ವೇ.ಮೂ. ಕೃಷ್ಣರಾಜ ಭಟ್ ಬಪ್ಪನಾಡು ನೇತೃತ್ವದಲ್ಲಿ ನಡೆಯಿತು.
ಈ ಸಂದರ್ಭ ಅಧ್ಯಕ್ಷ ಸುಭಾಷ್ ಶೆಟ್ಟಿ ಮಾತನಾಡಿ, ನ.ಪಂ. ವ್ಯಾಪ್ತಿಯಲ್ಲಿ ಸ್ವಚ್ಛತೆ ಮೂಲಕ ಉತ್ತಮ ಕಾರ್ಯಕ್ರಮ ಹಮ್ಮಿಕೊಳ್ಳಲು ನೂತನ ಆಡಳಿತ ನಿರ್ಧರಿಸಿದ್ದು ನಾಗರಿಕರ ಸಹಕಾರ ಕೋರಿದರು.
ಮುಖ್ಯಾಧಿಕಾರಿ ಚಂದ್ರ ಪೂಜಾರಿ ಮಾತನಾಡಿ, ದೀಪಾವಳಿ ಎಲ್ಲರಿಗೂ ಸುಖ ಸಮೃದ್ಧಿ ತರಲಿ ಹಾಗೂ ಕೊರೊನಾ ವಿಶ್ವದಿಂದಲೇ ತೊಲಗಿ, ಶಾಂತಿ ನೆಲೆಸಲಿ ಎಂದು ಶುಭ ಹಾರೈಸಿದರು.
ಮೂಡಬಿದ್ರೆ ಪುರಸಭೆ ಮುಖ್ಯಾಧಿಕಾರಿ ಇಂದು ಎಂ., ಮುಲ್ಕಿ ನ.ಪಂ. ಮಾಜಿ ಅಧ್ಯಕ್ಷ ಸುನಿಲ್ ಆಳ್ವ, ಉಪಾಧ್ಯಕ್ಷ ಸತೀಶ್ ಅಂಚನ್, ಸದಸ್ಯರಾದ ಪುತ್ತುಬಾವ, ಶೈಲೇಶ್ ಕುಮಾರ್, ಬಾಲಚಂದ್ರ ಕಾಮತ್, ಸಂದೀಪ್ ಕುಮಾರ್, ಮಂಜುನಾಥ ಕಂಬಾರ, ಶಾಂತ ಕಿರೋಡಿಯನ್, ರಾಧಿಕಾ ಯಾದವ ಕೋಟ್ಯಾನ್, ಯೋಗೀಶ್ ಕೋಟ್ಯಾನ್, ಮತ್ತಿತರರು ಉಪಸ್ಥಿತರಿದ್ದರು. ಕಂದಾಯಾಧಿಕಾರಿ ಅಶೋಕ್ ಸ್ವಾಗತಿಸಿ, ನಿರೂಪಿಸಿದರು.
Kshetra Samachara
14/11/2020 05:13 pm