ಕಾಪು: ಶ್ರೀ ಅಯ್ಯಪ್ಪ ಸೇವಾ ಸಮಾಜಂ ಕಾಪು ಘಟಕದ ವತಿಯಿಂದ ಕಾಪು ಶ್ರೀ ವೀರಭದ್ರ ಸಭಾ ಭವನದಲ್ಲಿ ಶ್ರೀ ಶಬರಿಮಲೆ ಅಯ್ಯಪ್ಪನ ದರ್ಶನಕ್ಕೆ ಯಾತ್ರೆ ಕೈಗೊಳ್ಳುವ ಕುರಿತು ವಿಚಾರ ವಿಮರ್ಶೆ ಭಾನುವಾರ
ನಡೆಯಿತು.
ಈ ಸಂದರ್ಭ ಸಂಸ್ಥೆ ಕಾರ್ಯದರ್ಶಿ ದಿವಾಕರ್ ಶೆಟ್ಟಿ ಮಾತನಾಡಿ, ಈ ಬಾರಿ ಕೋವಿಡ್ 19 ಸಮಸ್ಯೆಯಿಂದಾಗಿ ಕೇರಳ ಸರಕಾರ ಮಾರ್ಗಸೂಚಿ ಹೊರಡಿಸಿದ್ದು, ಇದರಿಂದಾಗಿ ಶ್ರೀ ಅಯ್ಯಪ್ಪ ಮಾಲಾಧಾರಿಗಳು ಸಮಸ್ಯೆ ಎದುರಿಸುವಂತಾಗಿದೆ. ಸರಕಾರದ ನಿಯಮ ಪಾಲಿಸಿಕೊಂಡು ಅಯ್ಯಪ್ಪ ಭಕ್ತರು ಮಾಲೆ ಧರಿಸದೆ, ತಮ್ಮ ತಮ್ಮ ಪ್ರದೇಶಗಳಲ್ಲಿ ವ್ರತಾಧಾರಿಗಳಾಗಿದ್ದು, ಮನೆ- ಮಂದಿರಗಳಲ್ಲಿ ಶ್ರೀ ಅಯ್ಯಪ್ಪ ಸ್ವಾಮಿಯ ಪೂಜೆ ಮಾಡುವುದು ಉತ್ತಮ. ಡಿಸೆಂಬರ್ ಅಂತ್ಯದೊಳಗೆ ಕೊರೊನಾ ಸಮಸ್ಯೆ ತಿಳಿಗೊಂಡು ಸರಕಾರದ ನಿಯಮಾವಳಿ ಸಡಿಲವಾದರೆ ಮಾಲಾಧಾರಿಗಳಾಗಿ ಶಬರಿಮಲೆ ಯಾತ್ರೆ ಕೈಗೊಳ್ಳಲು ಸಾಧ್ಯವಿದೆ. ಅದಲ್ಲದೆ, ಕೊರೊನಾ ಸಂದರ್ಭ ಯಾತ್ರೆ ಕೈಗೊಂಡು ಯಾರಿಗಾದರೂ ಕೊರೊನಾ ಪಾಸಿಟಿವ್ ಕಂಡು ಬಂದರೆ, ಪ್ರತಿಯೊಬ್ಬರೂ ಈ ಸಮಸ್ಯೆ ಎದುರಿಸುವಂತಾದೀತು ಎಂದು ಎಚ್ಚರಿಸಿದರು.
ಸಂಘದ ಜಿಲ್ಲಾಧ್ಯಕ್ಷ ಆರ್.ಕೆ. ಮೆಂಡನ್, ಜಿಲ್ಲಾ ಕಾರ್ಯದರ್ಶಿ ರಂಜಿತ್ ಶೆಟ್ಟಿ,ಗೌರವಾಧ್ಯಕ್ಷ ಲೀಲಾಧರ್ ಶೆಟ್ಟಿ ಕರಂದಾಡಿ,ಕಾರ್ಯಾಧ್ಯಕ್ಷ ರಘುರಾಮ್ ಶೆಟ್ಟಿ, ಉಪಾಧ್ಯಕ್ಷ ಗೋಪಾಲ್ ,ಕೋಶಾಧಿಕಾರಿ ಶ್ರೀಧರ್ ಶೆಟ್ಟಿಗಾರ್ ಮೊದಲಾದವರು ಉಪಸ್ಥಿತರಿದ್ದರು.
Kshetra Samachara
09/11/2020 10:48 am