ಉಡುಪಿ: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಆಯೋಜಿಸಿದ 2019ನೇ ಸಾಲಿನ ಪ್ರತಿಷ್ಠಿತ ಪಾರ್ತಿಸುಬ್ಬ ಗೌರವ ಪ್ರಶಸ್ತಿ ಹಾಗೂ ಯಕ್ಷಸಿರಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅನೇಕ ಕಲಾವಿದರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ವಿಜೇತ ಯಕ್ಷಗಾನ ಕಲಾವಿದರಿಗೆ ಸರ್ಕಾರದ ವತಿಯಿಂದ ವೈದ್ಯಕೀಯ ಸೌಲಭ್ಯ ಹಾಗೂ 58 ವರ್ಷಕ್ಕಿಂತ ಹಿರಿಯ ಕಲಾವಿದರಿಗೆ ಮಾಸಾಶನ ದೊರೆಯಿತು. ಈ ಸಂದರ್ಭ ಮಾತನಾಡಿದ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ.ಎಂ ಹೆಗಡೆ, ಸರ್ಕಾರದಿಂದ ಅಕಾಡೆಮಿಗೆ ಸಿಗುವ ವಾರ್ಷಿಕ ಅನುದಾನ ಈಗ 70 ಲಕ್ಷ ರೂ.ಗೆ ಇಳಿದಿದೆ. ಆದರೂ ಅಕಾಡೆಮಿ ಕೈಲಾದ ಸಹಾಯ ಮಾಡುತ್ತಿದೆ. ಅಕಾಡೆಮಿ ಪ್ರಶಸ್ತಿ ವಿಜೇತರಿಗೆ ವೈದ್ಯಕೀಯ ವೆಚ್ಚ ಸರ್ಕಾರದಿಂದ ಭರಿಸುವ ಅವಕಾಶವಿದೆ. ಹಾಗೇ ಹಿರಿಯ ಕಲಾವಿದರಿಗೆ ಮಾಸಿಕ 2 ಸಾವಿರ ರೂ. ಮಾಸಾಶನ ದೊರೆಯುತ್ತಿದೆ. ಕೊರೊನಾ ಹಾವಳಿಯ ಈ ಸಮಯ ಕಲಾವಿದರಿಗೆ ಸಹಾಯವಾಗುತ್ತದೆ. ಅರ್ಜಿ ಹಾಕಿ ಎಂದು ಸಲಹೆ ನೀಡಿದರು.
Kshetra Samachara
09/11/2020 10:07 am