ಮಂಗಳೂರು: ಏಳರ ಹರೆಯದ ಬಾಲಕನೊಬ್ಬ ತುಳುನಾಡಿನ ಕಾರಣಿಕ ದೈವ, ಅಷ್ಟೇ ಜನಪ್ರೀತಿಯ ಕೊರಗಜ್ಜನನ್ನು ಮುಗ್ಧತೆ, ತನ್ಮಯತೆಯಿಂದ ಸ್ತುತಿಸಿ, ಹಾಡಿದ ಹಾಡೊಂದು ನಾನಾ ಮೀಡಿಯ ಸಹಿತ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಭಾರಿ ಜನಪ್ರಿಯತೆ ಗಳಿಸಿರುವುದು ಸರ್ವ ವೇದ್ಯ.
ಸುಲಲಿತ ಶಬ್ದೋಚ್ಚಾರದ ಗಾಯನ ಮಾಧುರ್ಯತೆ ಎಲ್ಲರ ಮನದಲ್ಲಿ ಹಸಿರಾಗಿ ಇರುವಂತೆಯೇ ಆ "ಬಾಲ ಗಂಧರ್ವ" ಕಾರ್ತಿಕ್ ಇದೀಗ ಸ್ವಾಮಿ ಕೊರಗಜ್ಜ ದೈವದ ಮಹಿಮೆ, ಹಿರಿಮೆ ಸಾರುವ ಸುಂದರ ದೃಶ್ಯ ಕಾವ್ಯದ ವೀಡಿಯೊ ಆಲ್ಬಂವೊಂದರಲ್ಲಿ ಪ್ರತಿಭಾನ್ವಿತ ಗಾಯಕಿ ಚೈತ್ರ ಕಲ್ಲಡ್ಕ ಅವರೊಂದಿಗೆ ಸುಶ್ರಾವ್ಯ ವಾಗಿ ಹಾಡಿರುವ ಸುಮಧುರ ಹಾಡು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಾ ಭಕ್ತಜನರ ಮನ ಸೂರೆಗೊಳ್ಳುತ್ತಿದೆ.
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಅಜೆಕಾರು- ಹೆಬ್ರಿ ಮಧ್ಯೆ ಮೂಜೂರು ಬಳಿಯ ನಿವಾಸಿ, ಕೂಲಿಯಾಳು ಪೂವಪ್ಪ-ಲೋಲಾಕ್ಷಿ ದಂಪತಿಯ ಒಂದು ಹೆಣ್ಣು, ಇಬ್ಬರು ಗಂಡು ಮಕ್ಕಳಲ್ಲಿ ಕೊನೆಯವನೇ ಈ ಕಾರ್ತಿಕ್.
ಕೊರಗಜ್ಜನ ಪದ್ಯ ಹಾಡಲು ಕಾರ್ತಿಕ್ ಯಾವುದೇ ಸಂಗೀತ ತರಬೇತಿಯನ್ನೇ ಪಡೆದಿಲ್ಲ!.
Kshetra Samachara
09/11/2020 09:58 am