ಉಚ್ಚಿಲ: ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ನಟೇಶ ನೃತ್ಯ ನಿಕೇತನ ಉಚ್ಚಿಲ ಸಂಸ್ಥಾಪಕಿ, ಭರತನಾಟ್ಯ ಗುರು ವಿದುಷಿ ಮಂಗಳಾ ಕಿಶೋರ್ ದೇವಾಡಿಗ ಅವರನ್ನು ನೃತ್ಯ ನಿಕೇತನ ಸಂಸ್ಥೆಯ ಎಲ್ಲಾ ಶಿಷ್ಯೆಯರು ಹಾಗೂ ಅವರ ಪೋಷಕರು ಶುಕ್ರವಾರ ಅಭಿನಂದಿಸಿ, ಸನ್ಮಾನಿಸಿದರು.
ಈ ಸಂದರ್ಭ ವಿದುಷಿ ಮಂಗಳಾ ದೇವಾಡಿಗ ಮಾತನಾಡಿ, ನನಗೆ ಈ ಸಿಕ್ಕ ಸನ್ಮಾನವು ನನ್ನ ಗುರುಗಳಾದ ದಿ. ರಾಧಾಕೃಷ್ಣ ತಂತ್ರಿ ಹಾಗೂ ವೀಣಾ ಎಂ ಸಾಮಗ ಅವರಿಗೆ ಸಲ್ಲುತ್ತದೆ. ಭರತನಾಟ್ಯ ತರಬೇತಿ ಪಡೆದು ಈ ಹಂತಕ್ಕೆ ಬೆಳೆಯಲು ನನ್ನ ತಂದೆ ಪ್ರಕಾಶ್ ದೇವಾಡಿಗ, ತಾಯಿ ಲತಾ ಪ್ರಕಾಶ್ ದೇವಾಡಿಗ, ನನ್ನ ಗಂಡ ಕಿಶೋರ್ ದೇವಾಡಿಗ ಮತ್ತು ನನ್ನ ಅತ್ತೆ, ಮಾವ ಎಲ್ಲರೂ ಕಾರಣೀಭೂತರಾಗಿದ್ದು, ಅವರೆಲ್ಲರಿಗೂ ಈ ರಾಜ್ಯೋತ್ಸವ ಪ್ರಶಸ್ತಿ ಸಮರ್ಪಣೆ ಎಂದರು.
Kshetra Samachara
06/11/2020 06:53 pm