ವರದಿ: ಶಫೀ ಉಚ್ಚಿಲ
ಉಡುಪಿ: ಉದ್ಯಾವರ ಐಸಿವೈಎಂ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿ ದಾಂತಿ ಸಹೋದರರ ಸಹಕಾರದೊಂದಿಗೆ ಉದ್ಯಾವರ, ಕಡೆಕಾರು-ಕುತ್ಪಾಡಿ, ಅಲೆವೂರು ಗ್ರಾಪಂ ವ್ಯಾಪ್ತಿಯ 75 ಕೃಷಿ ಕುಟುಂಬಗಳನ್ನು ಹಾಗೂ ಕಂಬಳ ಕೋಣಗಳ ಮಾಲೀಕರನ್ನು ಸನ್ಮಾನಿಸಲಾಯಿತು.
ಉಡುಪಿ ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಎಚ್. ಕೆಂಪೇಗೌಡ, ಕಂಬಳದ ಕೋಣಗಳನ್ನು ಗದ್ದೆಗೆ ಇಳಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಕುಲಪತಿ ವಂ. ಫಾ. ಸ್ಟ್ಯಾನಿ ಬಿ. ಲೋಬೊ, ಜಿ.ಪಂ. ಸದಸ್ಯೆ ಗೀತಾಂಜಲಿ ಸುವರ್ಣ ಮಾತನಾಡಿದರು.
ಉದ್ಯಾವರದ ಪಶುವೈದ್ಯಾಧಿಕಾರಿ ಡಾ. ಸಂದೀಪ್ ಕುಮಾರ್, ಉಡುಪಿ ತಾಲೂಕು ಕಿಸಾನ್ ಘಟಕ ಅಧ್ಯಕ್ಷ ಸುಭಾಷಿತ್ ಕುಮಾರ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಮೈಕಲ್ ಡಿಸೋಜ ಸ್ವಾಗತಿಸಿದರು. ಜೂಲಿಯನ್ ದಾಂತಿ ವಂದಿಸಿದರು. ಕಾರ್ಯಕ್ರಮ ಸಂಚಾಲಕ ಸ್ಟೀವನ್ ಕುಲಾಸೊ ಉದ್ಯಾವರ ನಿರೂಪಿಸಿದರು.
Kshetra Samachara
12/11/2020 07:39 am