ಪರ್ಕಳ: ಸರಿಗಮ ಭಾರತಿ ಸಂಗೀತ ವಿದ್ಯಾಲಯದ ನವರಾತ್ರಿಯ ವಿಜಯದಶಮಿ ನಾದೋಪಾಸನೆಯ ಪಂಚರತ್ನ ಸಂಗೀತ ಗೋಷ್ಠಿ, ದೇವಿ ನವಾವರಣ ಕೃತಿಗಳ ಪ್ರಸ್ತುತಿಯ ಮೊದಲು,ಯುವ ಪ್ರತಿಭೆ ದಿವ್ಯಶ್ರೀ ಮಣಿಪಾಲ ಅವರಿಗೆ ಬಿಜೂರಿನ ಶ್ರೀಮಹಾದೇವ ಸಾಂಸ್ಕ್ಫತಿಕ ಪ್ರತಿಷ್ಠಾನದ ವತಿಯಿಂದ 2020 ರ ಶ್ರೀ ಮಹಾದೇವ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಈ ಸರಳ ಸಂಗೀತ ಗೋಷ್ಠಿ ಪರ್ಕಳದ ಸರಿಗಮ ಭಾರತಿ ವಿದ್ಯಾಲಯದಲ್ಲಿ ಜರುಗಿತು. ಕಲಾಶಾಲೆಯ ಸಂಗೀತ ಗುರು ವಿದುಷಿ ಉಮಾ ಉದಯ ಶಂಕರ್ ಕಾರ್ಯಕ್ರಮ ಸಂಘಟಿಸಿದ್ದರು. ಡಾ.ಗಣಪತಿ ಜೋಯಿಸ, ಡಾ ಉದಯ ಶಂಕರ್, ರಾಘವೇಂದ್ರ ಆಚಾರ್ಯ, ರಾಮಚಂದ್ರ ಭಟ್ , ಉಮಾಶಂಕರಿ ಹಾಗೂ ವಿವಿಧ ಗಣ್ಯರು ಉಪಸ್ಥಿತರಿದ್ದರು.
ಬೆಳಿಗ್ಗೆಯಿಂದ ಪುಟಾಣಿಗಳಿಂದ ಹಾಗೂ ನುರಿತ ಕಲಾವಿದರಿಂದ ಸಂಗೀತ ಸುಧೆ ಜರುಗಿತು. ಕೊರೊನಾ ವಾರಿಯರ್ಸ್ ಡಾ.ಅಭಯನಾರಾಯಣ ಹಾಗೂ ಶ್ರೀಮತಿ ಡಾ.ಶ್ರೀಕರಿ ಅಭಯನಾರಾಯಣ ದೀಪ ಬೆಳಗಿ ಕಾರ್ಯಕ್ರಮ ಉದ್ಘಾಟಿಸಿದರು. ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಸಮಾರೋಪ ಭಾಷಣ ಮಾಡಿದರು.
Kshetra Samachara
03/11/2020 04:08 pm