ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಬಿಲ್ಲವ ಸಮಾಜದ ಅಗ್ರಗಣ್ಯ ಮುಖಂಡ ಜಯ ಸಿ. ಸುವರ್ಣ ರಿಗೆ ಶ್ರದ್ಧಾಂಜಲಿ

ಉಡುಪಿ: ಬಿಲ್ಲವ ಯುವ ವೇದಿಕೆ ಉಡುಪಿ ಜಿಲ್ಲೆ ವತಿಯಿಂದ ಬಿಲ್ಲವ ಸಮಾಜದ ಅಗ್ರಗಣ್ಯ ಮುಖಂಡ , ಕರ್ಮಯೋಗಿ

ದಿ.ಜಯ ಸಿ. ಸುವರ್ಣರ ಸದ್ಗತಿಗಾಗಿ ಭಗವಂತನಲ್ಲಿ ಪ್ರಾರ್ಥಿಸಿಕೊಳ್ಳುವ ಸಲುವಾಗಿ ಬನ್ನಂಜೆ ಬಿಲ್ಲವ ಸೇವಾ ಸಂಘದ ಸಭಾಭವನದಲ್ಲಿ ಭಜನಾ ಸಂಕೀರ್ತನೆ ಹಾಗೂ ನುಡಿ ನಮನ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಬಿಲ್ಲವ ವೇದಿಕೆಯ ಗೌರವಾಧ್ಯಕ್ಷ ದಿವಾಕರ್ ಸನಿಲ್ ಅವರು ದಿ. ಜಯ ಸಿ. ಸುವರ್ಣ ಅವರು ಮಾಡಿದ ಸಾಧನೆಯ ಬಗ್ಗೆ ಮಾತನಾಡಿ, ನುಡಿನಮನ ಸಲ್ಲಿಸಿದರು.ಬಿಲ್ಲವ ಯುವವೇದಿಕೆಯ ಅಧ್ಯಕ್ಷ ಪ್ರವೀಣ್ ಎಂ.ಪೂಜಾರಿ ಮಾತನಾಡಿ, ಜಯ ಸಿ.ಸುವರ್ಣ ಅವರು ಬಿಲ್ಲವ ಸಮಾಜಕ್ಕೆ ನೀಡಿದ ಸೇವೆ ಎಂದೂ ಮರೆಯುವಂತಿಲ್ಲ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹಲವಾರು ಯುವಕರಿಗೆ ಉದ್ಯೋಗ ಸೃಷ್ಟಿಸಿ ಸಮಾಜವನ್ನು ಬೆಳೆಸುವ ಕೆಲಸ ಕೂಡ ಮಾಡಿದ್ದಾರೆ ಎಂದರು.

ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ , ಬಿಲ್ಲವ ಸಮಾಜದ ಮುಖಂಡರು, ಬಿಲ್ಲವ ಯುವ ವೇದಿಕೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು

Edited By : Manjunath H D
Kshetra Samachara

Kshetra Samachara

03/11/2020 01:03 pm

Cinque Terre

11.78 K

Cinque Terre

0