ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಮನೆ ಮನೆಗೆ ಬಂತು ಬಪ್ಪನಾಡು ಚಿಕ್ಕಮೇಳ: ಕಲಾಪ್ರೇಮಿಗಳ ಮನವರಳಿಸಿತು ಯಕ್ಷ ಮಾಧುರ್ಯ

ಮುಲ್ಕಿ: ಕರಾವಳಿಯಲ್ಲಿ ಕೋವಿಡ್ ಕಾರಣದಿಂದ ಸ್ಥಗಿತಗೊಂಡಿದ್ದ ಯಕ್ಷಗಾನ ಮೇಳಗಳು ತನ್ನ ಪ್ರದರ್ಶನಗಳಿಗೆ ಈಗ ಮುಂದಾಗುತ್ತಿವೆ.

ಅಲ್ಲಲ್ಲಿ ಚಿಕ್ಕಮೇಳಗಳು ಮನೆ-ಮನೆಗೆ ಹೋಗಿ ಪ್ರದರ್ಶನ ನೀಡುತ್ತಿವೆ. ದ.ಕ.ಜಿಲ್ಲೆಯ ಮುಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ದೊಡ್ಡ ಮೇಳ ಇನ್ನೂ ತಿರುಗಾಟ ಆರಂಭಿಸಿಲ್ಲ. ಆದರೆ, ಚಿಕ್ಕಮೇಳ ತಿರುಗಾಟ ಆರಂಭಿಸಿದ್ದು ಮನೆಮನೆಗೆ ಹೋಗಿ ಪ್ರದರ್ಶನ ನೀಡುತ್ತಿದೆ.

ಮುಲ್ಕಿ ಪರಿಸರದ ಅಚ್ಚುನಂದನ್ ರೆಸಿಡೆನ್ಸಿ ವಸತಿ ಸಮುಚ್ಚಯದಲ್ಲಿ ಭಾನುವಾರ ರಾತ್ರಿ ಬಪ್ಪನಾಡು ದುರ್ಗೆಯ ಚಿಕ್ಕಮೇಳ ನಡೆಸಿಕೊಟ್ಟ "ಕಚ- ದೇವಯಾನಿ" ಕಿರು ಯಕ್ಷಗಾನ ಪ್ರದರ್ಶನ ಎಲ್ಲರ ಮನ ಸೆಳೆಯಿತು. ವೃತ್ತಿ ಮೇಳದ ಖ್ಯಾತ ಕಲಾವಿದರಾದ ತುಂಬೆ ಚಂದ್ರಹಾಸ್ ಮತ್ತು ಪರಮೇಶ್ವರ ಗಂಗನಾಡು ಕಚ- ದೇವಯಾನಿ ಪಾತ್ರದಲ್ಲಿ ಮನೋಜ್ಞ ಅಭಿನಯ ನೀಡಿದರು.

ಭಾಗವತರಾಗಿ ಸುರೇಶ ಹೆಗ್ಡೆ ಬಂಗಾಡಿ, ಮದ್ದಲೆಯಲ್ಲಿ ಹರೀಶ್ ಸಚ್ಚರಿಪೇಟೆ, ಚೆಂಡೆಯಲ್ಲಿ ರಾಜೇಶ್ ಮಡಂತ್ಯಾರು, ಚಿಕ್ಕಮೇಳದ ವ್ಯವಸ್ಥಾಪಕ ವಿನೋದ್ ಕುಮಾರ್ ಬಜಪೆ ಮತ್ತು ಮ್ಯಾನೇಜರ್ ಭವಾನಿ ಶಂಕರ್ ಶೆಟ್ಟಿ ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

02/11/2020 12:07 pm

Cinque Terre

16.98 K

Cinque Terre

3

ಸಂಬಂಧಿತ ಸುದ್ದಿ