ಮುಲ್ಕಿ: ರಾಜ್ಯೋತ್ಸವ ಪ್ರಶಸ್ತಿ ವಿಜೇತ ಬಿಲ್ಲವ ಮಹಾಮಂಡಲದ ಸ್ಥಾಪಕ ಅಧ್ಯಕ್ಷ ದಿ. ಜಯ ಸಿ. ಸುವರ್ಣರ ಸಾರ್ವಜನಿಕ ಶ್ರದ್ಧಾಂಜಲಿ ಸಭೆ ಭಾನುವಾರ ಮುಲ್ಕಿ ಬಿಲ್ಲವ ಸಂಘದಲ್ಲಿ ನಡೆಯಿತು. ಜನಪದ ವಿದ್ವಾಂಸ ಡಾ. ಗಣೇಶ್ ಅಮೀನ್ ಸಂಕಮಾರ್ ಮಾತನಾಡಿ, ದಿ. ಜಯ ಸುವರ್ಣರ ತತ್ವಾದರ್ಶ ಪಾಲಿಸುವ ಮುಖಾಂತರ ಅವರ ಯೋಜನೆ, ಆಲೋಚನೆ ಸಾಕಾರಗೊಳಿಸಲು ಎಲ್ಲರೂ ಕಾರ್ಯಪ್ರವೃತ್ತರಾಗಬೇಕು ಎಂದರು.
ಮುಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ರಮೇಶ ಕೊಕ್ಕರಕಲ್, ಜಯ ಸುವರ್ಣರ ಸಾಧನೆ, ಸಮಾಜಕ್ಕೆ ನೀಡಿದ ಕೊಡುಗೆ ತಿಳಿಸಿದರು. ಮುಲ್ಕಿ-ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ಜಯ ಸುವರ್ಣರು ಎಲ್ಲ ಸಮಾಜದ ಪ್ರೀತಿಗೆ ಪಾತ್ರರಾಗಿದ್ದು, ಸಮಾಜದ ಆಸ್ತಿ , ಶಕ್ತಿಯಾಗಿದ್ದರು ಎಂದರು. ಮಾಜಿ ಸಚಿವ ಅಭಯಚಂದ್ರ ಮಾತನಾಡಿ ದಿ. ಜಯ ಸುವರ್ಣರು ಬಡವರ ಉದ್ಧಾರಕರಾಗಿ ಭಾರತ್ ಕೋ- ಆಪರೇಟಿವ್ ಬ್ಯಾಂಕ್ ಮೂಲಕ ಅನೇಕರಿಗೆ ಉದ್ಯೋಗದಾತ ರಾಗಿ ಶಿಕ್ಷಣ ರಂಗದ ಸಾಧಕರಾಗಿದ್ದರು ಎಂದರು. ಮಾಜಿ ಕಸಾಪ ಅಧ್ಯಕ್ಷ ಹರಿಕೃಷ್ಣ ಪುನರೂರು ಮಾತನಾಡಿ, ಜಯ ಸುವರ್ಣರ ಆದರ್ಶ ಪರಿ ಪಾಲಿಸಿ ಅವರ ಸಾಧನೆಗಳನ್ನು ಪುಸ್ತಕ ರೂಪದಲ್ಲಿ ಹೊರತಂದು ಗೌರವ ಸಲ್ಲಿಸಬೇಕಾಗಿದೆ ಎಂದರು. ಅಧ್ಯಕ್ಷತೆ ವಹಿಸಿ ಮುಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾವಂತರು ಮಾತನಾಡಿ, ಜಯ ಸುವರ್ಣರು ಸರಳತೆಯ ಪ್ರತೀಕವಾಗಿದ್ದು, ಅವರ ಅಗಲುವಿಕೆ ಸಹಸ್ರಾರು ಅಭಿಮಾನಿಗಳಿಗೆ ನೋವು ತಂದಿದೆ ಎಂದರು.
ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆ ಉಪನ್ಯಾಸಕಿ ಸುಧಾರಾಣಿ, ಜಯ ಸುವರ್ಣರ ಸಾಧನೆಗಳ ಬಗ್ಗೆ ವಿವರಿಸಿದರು. ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಬಪ್ಪನಾಡು ದೇವಳದ ಆಡಳಿತ ಮೊಕ್ತೇಸರ ಮನೋಹರ ಶೆಟ್ಟಿ, ಮುಲ್ಕಿ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಹೆಗ್ಡೆ, ಮುಲ್ಕಿ ಬಿಲ್ಲವ ಮಹಾಮಂಡಲದ ವಿಜಯಕುಮಾರ್ ಕು ಬೆವೂರು, ರಂಗಕರ್ಮಿ ಚಂದ್ರಶೇಖರ ಸುವರ್ಣ, ಡಾ. ಹರಿಶ್ಚಂದ್ರ ಸಾಲಿಯಾನ್ ಹರೀಶ್ ಪುತ್ರನ್ ಮುಲ್ಕಿ ಉಪಸ್ಥಿತರಿದ್ದರು. ಕಮಲಾಕ್ಷ ಬಡಗುಹಿತ್ಲುವಂದಿಸಿದರು.
Kshetra Samachara
01/11/2020 07:38 pm