ಕಾಪು : ಕನ್ನಡ ಭಾಷೆ ಶ್ರೀಮಂತವಾಗಿದೆ. 2008ರಲ್ಲಿ ಶಾಸ್ತ್ರೀಯ ಸ್ಥಾನ ಮಾನ ಪಡೆದಿದೆ. ಕನ್ನಡ ಏಕೀಕರಣಕ್ಕೆ ಮೊದಲು ನಮ್ಮನ್ನು ಆಳಿದ ರಾಜ ಮಹಾರಾಜರು ಸ್ವಾತಂತ್ರ ಬಳಿಕ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿಗಳು ಕನ್ನಡ ನಾಡು, ನುಡಿಯ ಸರ್ವತೋಮುಖಬೆಳೆವಣಿಗೆಗೆ ಕಾರಣೀಭೂತರಾದರು. ಕಲೆ, ಸಾಹಿತ್ಯ, ಸಂಸ್ಕೃತಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ತಹಶೀಲ್ದಾರ್ ಮುಹಮ್ಮದ್ ಇಸ್ಹಾಕ್ ಸ್ಮರಿಸಿದರು.
ಕಾಪುವಿನ ಬಂಗ್ಲೆ ಮೈದಾನದಲ್ಲಿ ಭಾನುವಾರ ಕಾಪು ತಾಲೂಕು ಆಡಳಿತ ಸಮಿತಿ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ಕಾಪು ಪುರಸಭೆಯ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಬಳಿಕ ಶಾಸಕ ಲಾಲಾಜಿ ಆರ್ ಮೆಂಡನ್ ಮಾತನಾಡಿ
ಕಾಪುವಬಿಗೆ 10ಕೋಟಿ ರೂ. ಮಿನಿ ವಿಧಾನಸೌಧಕ್ಕೆ 3 ಕೋಟಿನ ರೂ. ಹಣಕಾಸು ಇಲಾಖೆಯಿಂದ ಮಂಜೂರಾತಿ ದೊರಕಿದ್ದು, ಟೆಂಡರ್ ಪ್ರಕ್ರಿಯೆಯಲ್ಲಿದೆ. ಮುಂದಿನ 20 ದಿನಗಳ ಒಳಗೆ ಮಿನಿವಿಧಾನ ಸೌಧಕ್ಕೆ ಶಿಲಾನ್ಯಾಸ ನೆರವೇರಿಸಲಾಗುವುದು ಎಂದು ಶಾಸಕ ಲಾಲಾಜಿ ಆರ್. ಮೆಂಡನ್ ಹೇಳಿದರು.
ನೆರೆ ಸಂದರ್ಭದಲ್ಲಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡವರನ್ನು ಗೌರವಿಸಲಾಯಿತು.ತಾಲೂಕಿನ 10 ಮಂದಿಗೆ ಹಕ್ಕುಪತ್ರ ವಿತರಿಸಲಾಯಿತು.ಉಪತಹಶೀಲ್ದಾರ್ ಆಗಿ ವರ್ಗಾವಣೆಗೊಂಡ ಕಾಪು ತಾಲೂಕು ಕಂದಾಯ ನಿರೀಕ್ಷಕ ರವಿ ಶಂಕರ ಕೆ. ಅವರನ್ನು ಅಭಿನಂದಿಸಲಾಯಿತು. ಪುರಸಭೆಯ ಮುಖ್ಯಾಧಿಕಾರಿ ವೆಂಕಟೇಶ್ ನಾವುಡ ಬಿ ಸ್ವಾಗತಿಸಿದರು. ಉಪನ್ಯಾಸಕ ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಣ ಸಂಯೋಜಕ ಶಂಕರ್ ಸುವರ್ಣ ವಂದಿಸಿದರು.
Kshetra Samachara
01/11/2020 03:15 pm