ಮೂಡುಬಿದಿರೆ: ಮಕ್ಕಿಮನೆ ಕಲಾವೃಂದ ಮಂಗಳೂರು ಇದರ ವತಿಯಿಂದ ಕೊರೋನಾ ಲಾಕ್‍ಡೌನ್ ಸಂದರ್ಭದಲ್ಲಿ ಆನ್‍ಲೈನ್ ಮೂಲಕ ನಡೆಸಿದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭ ಹಾಗೂ ನವರಾತ್ರಿ ದಸರಾ ಮಹೋತ್ಸವ-2020 ಇದರ ಸಮಾರೋಪ ಸಮಾರಂಭವು ಸಮಾಜ ಮಂದಿರದಲ್ಲಿ ನಡೆಯಿತು.
ಶಾಸಕ ಉಮಾನಾಥ ಕೋಟ್ಯಾನ್ ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಸ್ಪರ್ಧಾ ವಿಜೇತರಿಗೆ ಬಹುಮಾನವನ್ನು ವಿತರಿಸಿ ಮಾತನಾಡಿ ಕಲಾವಿದನ ಕಲಾ ಪ್ರೇಮದ ಸಾಹಸ ಪ್ರತಿಭೆಗಳನ್ನು ಗುರುತಿಸಿ ಹೊರ ತರುವಂತಿರಬೇಕು. ಕಲಾವಿದ ಕಲೆಯನ್ನು ಹವ್ಯಾಸವಾಗಿ ತೆಗೆದುಕೊಳ್ಳಬೇಕು ಹೊರತು ಅದೇ ವೃತ್ತಿಯಾಗಬಾರದು. ಬದುಕನ್ನು ಕಟ್ಟಿಕೊಳ್ಳಲು ಕಲೆಯಿಂದ ಸಹಕಾರಿಯಾಗುವುದಾದರೆ ಮಾತ್ರ ಅದನ್ನು ಸ್ವೀಕರಿಸಬೇಕು. ಕಲಾವಿದರು ಕಲೆಯಿಂದ ಒಳ್ಳೆಯತನವನ್ನು ಕಲಿಯಬೇಕು. ಕೆಟ್ಟ ಹವ್ಯಾಸಗಳನ್ನು ಬಿಡಬೇಕು ಎಂದ ಅವರು ಮಕ್ಕಿಮನೆ ತಂಡವು ಲಾಕ್‍ಡೌನ್ ಸಂದರ್ಭದಲ್ಲಿ ಮಕ್ಕಳ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಿರುವುದು ಶ್ಲಾಘನೀಯ ಎಂದು ಪ್ರಶಂಸಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಜಿಲ್ಲೆಯಲ್ಲಿ ವಿವಿಧ ಭಾಷೆಗಳನ್ನು ಆಡುವ ಜನರಿದ್ದರೂ ಮಾತೃ ಸಂಸ್ಕøತಿಯನ್ನು ಹೊಂದಿರುವ ಜನರು ನಾವು. ಪ್ರಾಚೀನದಲ್ಲಿದ್ದ ಪರಂಪರೆಯನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದ ನಾವಿಂದು ಆಮದು ಸಂಸ್ಕøತಿಯನ್ನು ಮನೆ-ಮನಗಳಲ್ಲಿ ತುಂಬಿಕೊಂಡಿರುವುದು ವಿಷಾಧನೀಯ ಎಂದರು.
ಕಲ್ಲಬೆಟ್ಟು ಎಕ್ಸಲೆಂಟ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಪುರಸಭಾ ಸದಸ್ಯೆ ಶ್ವೇತಾ ಕುಮಾರಿ, ಉದ್ಯಮಿಗಳಾದ ಶ್ರೀಪತಿ ಭಟ್, ರತ್ನಾಕರ ಜೈನ್, ರೋಟರಿ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ವಿನ್ಸೆಂಟ್ ಡಿ"ಕೋಸ್ತ, ಜೇಸಿಐ ಮೂಡುಬಿದಿರೆ ತ್ರಿಭುವನ್‍ನ ಅಧ್ಯಕ್ಷ ಸಂತೋಷ್ ಕುಮಾರ್, ಮೂಡುಬಿದಿರೆ ಪ್ರೆಸ್‍ಕ್ಲಬ್ ಅಧ್ಯಕ್ಷ ವೇಣುಗೋಪಾಲ್, ರೋಟರಿ ಕ್ಲಬ್ ಮಿಡ್‍ಟೌನ್‍ನ ಅಧ್ಯಕ್ಷ ಸುಶಾಂತ್ ಕರ್ಕೇರಾಜೈನ್ ಮಿಲನ್‍ನ ಮಾಜಿ ಅಧ್ಯಕ್ಷೆ ಶ್ವೇತಾ ಜೈನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಮಕ್ಕಿಮನೆ ಕಲಾವೃಂದದ ಸ್ಥಾಪಕ ಸುಧೇಶ್ ಜೈನ್ ಉಪಸ್ಥಿತರಿದ್ದರು.
Kshetra Samachara
27/10/2020 05:19 pm