ಕಾಪು: ಕಾಪು ಪೊಲೀಸ್ ಠಾಣೆಯಲ್ಲಿ ನವರಾತ್ರಿಯ ಮಹಾನವಮಿಯಂದು ಆಯುಧ ಪೂಜೆ ನಡೆಯಿತು. ಠಾಣಾಧಿಕಾರಿ ರಾಜಶೇಖರ ಸಾಗನೂರು ಸಹಿತ ಎಲ್ಲಾ ಸಿಬ್ಬಂದಿ ಹಳದಿ ಅಂಗಿ ಹಾಗೂ ಬಿಳಿ ಪಂಚೆಯುಟ್ಟು ಹಬ್ಬಕ್ಕೆ ಮೆರುಗು ತಂದರು. ದೇವರಿಗೆ ವಿಶೇಷ ಪೂಜೆ ಬಳಿಕ ಆಯುಧಗಳು ಮತ್ತು ವಾಹನಗಳಿಗೆ ಪೂಜೆ ಸಲ್ಲಿಸಲಾಯಿತು.
ಕಾರ್ಕಳ ಡಿವೈಎಸ್ಪಿ ಭರತ್ ರೆಡ್ಡಿ, ಉಡುಪಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರ ಚಂದ್ರ, ಠಾಣಾಧಿಕಾರಿ ರಾಜ ಶೇಖರ್ ಸಾಗನೂರು, ಶಾಸಕ ಲಾಲಾಜಿ ಮೆಂಡನ್, ಜಿಪಂ ಸದಸ್ಯರಾದ ಶಿಲ್ಪಾ ಸುವರ್ಣ, ಗೀತಾಂಜಲಿ ಸುವರ್ಣ, ಬಿಜೆಪಿ ಹಿರಿಯ ಮುಖಂಡ ಗುರ್ಮೆ ಸುರೇಶ್ ಶೆಟ್ಟಿ, ಜೆಡಿಎಸ್ ಉಡುಪಿ ಜಿಲ್ಲಾಧ್ಯಕ್ಷ ಬಾಲಾಜಿ ಯೋಗೀಶ್ ಶೆಟ್ಟಿ, ಸಂದೀಪ್ ಶೆಟ್ಟಿ ಕಲ್ಯ, ಮಹಿಳಾ ಬಿಜೆಪಿ ಅಧ್ಯಕ್ಷೆ ವೀಣಾ ಶೆಟ್ಟಿ, ಉಪಾಧ್ಯಕ್ಷೆ ಕೇಸರಿ ಯುವರಾಜ್, ಡಾ. ದೇವಿ ಪ್ರಸಾದ್ ಶೆಟ್ಟಿ, ವಾಸುದೇವ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
26/10/2020 06:06 pm