ಕುಂಜೂರು: ಇತಿಹಾಸ ಪ್ರಸಿದ್ಧ ಕುಂಜೂರು ಶ್ರೀ ದುರ್ಗಾ ದೇವಸ್ಥಾನದಲ್ಲಿ ಮಹಾ ಚಂಡಿಕಾ ಯಾಗ ಸಂಪನ್ನಗೊಂಡಿತು.
ನೂರಾರು ಭಕ್ತಾ ದಿಗಳು ಶ್ರೀ ಕುಂಜೂರಮ್ಮನ ಸಿರಿಮುಡಿ ಗಂಧ ಪ್ರಸಾದ ಸ್ವೀಕರಿಸಿ ಕೃತಾರ್ಥರಾದರು.
ಈ ಸಂದರ್ಭ ದೇವಳದ ತಂತ್ರಿ ವೇದಮೂರ್ತಿ ಕೇಂಜ ಶ್ರೀಧರ ತಂತ್ರಿಗಳು ಮಾತನಾಡಿ, ಕೋವಿಡ್ 19 ಕಾರಣದಿಂದ ನಾವು ಈ ಬಾರಿ ಆದಷ್ಟು ಸರಳವಾಗಿ ನವರಾತ್ರಿ ಉತ್ಸವ ಆಚರಿಸಿದ್ದೇವೆ. ತಾಯಿ ಕುಂಜೂರಮ್ಮ, ಲೋಕಕ್ಕೆ ಬಂದ ಕೊರೊನಾ ಎಂಬ ಕಂಟಕ ಶೀಘ್ರ ಪರಿಹರಿಸುತ್ತಾಳೆ ಎಂದರು.
ಅರ್ಚಕ ಚಕ್ರಪಾಣಿ ಉಡುಪ ಮಾತನಾಡಿ, ಈ ಬಾರಿ ನವರಾತ್ರಿ ಉತ್ಸವ ಸರಕಾರದ ನಿಯಮಾನುಸಾರ ಅತಿ ಸರಳವಾಗಿ ಆಚರಿಸಿದ್ದೇವೆ. ಈ ಬಾರಿ ಮಹಾ ಅನ್ನ ಸಂತರ್ಪಣೆ ರದ್ದು ಗೊಳಿಸಿದ್ದೇವೆ ಎಂದರು.
ದೇವಳದ ತಂತ್ರಿಗಳಾದ ವೇ. ಮೂ. ಕೇಂಜ ಶ್ರೀಧರ ತಂತ್ರಿ, ಆಡಳಿತ ಮೊಕ್ತೇಸರ ನಡಿಮನೆ ದೇವರಾಜ್ ರಾವ್, ಶ್ರೀವತ್ಸ ರಾವ್, ಪ್ರಧಾನ ಅರ್ಚಕ ಚಕ್ರಪಾಣಿ ಉಡುಪ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.
Kshetra Samachara
26/10/2020 05:58 pm