ಮುಲ್ಕಿ: ಆಯುಧ ಪೂಜೆ ಅಂಗವಾಗಿ ಮುಲ್ಕಿ ಆಟೋ ಚಾಲಕರ ವತಿಯಿಂದ ಮುಲ್ಕಿ ಬಸ್ ನಿಲ್ದಾಣ ಬಳಿ ವಾಹನ ಪೂಜೆ ನಡೆಯಿತು.
ಮುಲ್ಕಿ ಬಸ್ ನಿಲ್ದಾಣ ಪಾರ್ಕಿನ ರಿಕ್ಷಾ ಚಾಲಕರು ಪೂಜೆಯಲ್ಲಿ ಭಾಗವಹಿಸಿದ್ದರು. ವೇದಮೂರ್ತಿ ಕೊಲಕಾಡಿ ವಾದಿರಾಜ ಉಪಾಧ್ಯಾಯ ನೇತೃತ್ವದಲ್ಲಿ ವಿಜಯ ದಶಮಿ ಪ್ರಯುಕ್ತ ವಾಹನ ಪೂಜೆ, ಲಕ್ಷ್ಮಿ ಪೂಜೆ ನಡೆಯಿತು. ವಾಹನ ಪೂಜೆ ಮಾಡಿ ಶ್ರೀವತ್ಸ ಉಪಾಧ್ಯಾಯ ಮಾತನಾಡಿ, ರಿಕ್ಷಾ ಚಾಲಕರ ಸಂಘಟನೆ ಇನ್ನಷ್ಟು ಬೆಳೆದು, ನಾನಾ ಸಾಮಾಜಿಕ ಕಾರ್ಯಕ್ರಮ ಹಮ್ಮಿಕೊಂಡು ಬಲಗೊಳ್ಳಲಿ ಎಂದು ಶುಭ ಹಾರೈಸಿದರು.
ಮುಲ್ಕಿ ಆಟೋ ಚಾಲಕರ ಸಂಘದ ಅಧ್ಯಕ್ಷ ನಾಗರಾಜ ಕೊಲಕಾಡಿ, ಉಪಾಧ್ಯಕ್ಷ ಸತೀಶ್ ಕೋಟ್ಯಾನ್, ಕೋಶಾಧಿಕಾರಿ ಕೃಷ್ಣಪ್ಪ ಸನಿಲ್, ಕಾರ್ಯದರ್ಶಿ ಮೋಹನ್ ಕುಬೆವೂರು, ಸದಸ್ಯರಾದ ಪ್ರವೀಣ್ ಕಾಮತ್, ಶಿವ ಕೊಳಚಿಕಂಬಳ, ವಾಮನ ಹರಿಹರ ಕಾರ್ನಾಡು, ಶೇಖರ್ ಕಕ್ವ, ಚಂದ್ರಹಾಸ ಪೂಜಾರಿ, ಸಂತೋಷ ಕವತ್ತಾರು , ಗೋಪಿನಾಥ ಸಾಲ್ಯಾನ್, ವಿಲ್ಫ್ರೆಡ್ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
25/10/2020 06:09 pm