ಮುಲ್ಕಿ: ಮುಲ್ಕಿ ಪೊಲೀಸ್ ಠಾಣೆಯಲ್ಲಿ ವಿಜಯದಶಮಿ ಪ್ರಯುಕ್ತ ಆಯುಧ ಪೂಜೆ ನಡೆಯಿತು.
ಠಾಣೆಯಲ್ಲಿ ಅರ್ಚಕ ಶ್ರೀಪತಿ ಉಪಾಧ್ಯಾಯರ ನೇತೃತ್ವದಲ್ಲಿ ಗಣಹೋಮ, ವಾಹನ ಪೂಜೆ ನಡೆಯಿತು. ಈ ಸಂದರ್ಭ ಮುಲ್ಕಿ ಠಾಣಾ ಇನ್ ಸ್ಪೆಕ್ಟರ್ ಜಯರಾಮ ಗೌಡ ಮಾತನಾಡಿ, ಮುಲ್ಕಿ ಹೋಬಳಿಯ ನಾಗರಿಕರಿಗೆ ಆಯುಧ ಪೂಜೆಯ ಶುಭಾಶಯ ಕೋರಿದ ಅವರು, ಹಬ್ಬ-ಹರಿದಿನಗಳಲ್ಲಿ ನಾಗರಿಕರು ಆದಷ್ಟು ಎಚ್ಚರಿಕೆಯಿಂದ ಇರಬೇಕು. ಕಳವು ಸಹಿತ ನಾನಾ ಅಪರಾಧ ಪ್ರಕರಣ ತಡೆಗಟ್ಟಲು ನಾಗರಿಕರ ಸಹಕಾರ ಅಗತ್ಯ ಎಂದರು. ಮುಲ್ಕಿ ಎಸ್ಐ ವಿನಾಯಕ ತೋರಗಲ್, ಕ್ರೈಂ ಎಸ್ಸೈ ದೇಜಪ್ಪ, ಸಿಬ್ಬಂದಿ ಉಪಸ್ಥಿತರಿದ್ದರು.
ಈ ಸಂದರ್ಭ ಧಾರ್ಮಿಕ ಪರಿಷತ್ ಸದಸ್ಯ ಭುವನಾಭಿರಾಮ ಉಡುಪ, ಮುಲ್ಕಿ ನ.ಪಂ. ಸದಸ್ಯರಾದ ಪುತ್ತುಬಾವ, ಸತೀಶ್ ಅಂಚನ್, ಬಾಲಚಂದ್ರ ಕಾಮತ್, ಮಾಜಿ ಸದಸ್ಯ ಅಬ್ದುಲ್ ರಜಾಕ್, ರಂಗಕರ್ಮಿ ಚಂದ್ರಶೇಖರ ಸುವರ್ಣ, ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಮಟ್ಟು, ಕೆಪಿಸಿಸಿ ಕೋ-ಆರ್ಡಿನೇಟರ್ ವಸಂತ ಬೆರ್ನಾಡ್, ಮುಲ್ಕಿ ವಿಜಯ ಸೊಸೈಟಿ ಅಧ್ಯಕ್ಷ ರಂಗನಾಥ ಶೆಟ್ಟಿ,ನಿವೃತ್ತ ಪೊಲೀಸ್ ಸಿಬ್ಬಂದಿ ಮೋಹನ್, ಚಂದಪ್ಪ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
25/10/2020 06:03 pm