ಕಾಪು: ಕಾಪು ತಾಲೂಕಿನ ಕೊಪ್ಪಲಂಗಡಿ ಶ್ರೀ ವಾಸುದೇವ ದೇವಸ್ಥಾನದಲ್ಲಿ ಮಹಿಳಾ ಭಜನಾ ತಂಡವನ್ನು ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಉದ್ಘಾಟಿಸಿದರು. ಅರ್ಚಕ ನಾಗರಾಜ್ ಭಟ್ ಪೂಜಾ ವಿಧಿವಿಧಾನ ನೆರವೇರಿಸಿದರು.
ಉಮೇಶ್ ಪೂಜಾರಿ ನೇತೃತ್ವದಲ್ಲಿ 16 ಯುವತಿಯರ ತಂಡವನ್ನು ರಚಿಸಲಾಗಿದ್ದು, ತಂಡದಲ್ಲಿ ಕಾಪು, ಮೂಳೂರು, ಉಚ್ಚಿಲ, ಕೋತಲ್‍ಕಟ್ಟೆ ಪರಿಸರದ ಯುವತಿಯರು ಇದ್ದಾರೆ.
ಪುರಾಣ ಕಾಲದಲ್ಲಿಯೂ ಕನಕದಾಸರು, ಪುರಂದರದಾಸರು ಭಜನೆಯಲ್ಲೇ ಭಗವಂತನನ್ನು ಸಾಕ್ಷಾತ್ಕಕರಿಸಿದ್ದಾರೆ. ಇಂದಿನ ಪೀಳಿಗೆಯು ಭಜನೆಯಲ್ಲಿ ಆಸಕ್ತಿ ತೋರುತ್ತಿರುವುದು ಸಂತಸದ ಸಂಗತಿ ಎಂದು ಶಾಸಕ ಲಾಲಾಜಿ ಆರ್. ಮೆಂಡನ್ ಹೇಳಿದರು.
ಕಾಪು ಬಿಜೆಪಿ ಮಾಜಿ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ರಮೇಶ್ ಹೆಗ್ಡೆ ಕಲ್ಯ, ತಂಡದ ಮುಖ್ಯಸ್ಥ ಉಮೇಶ್ ಪೂಜಾರಿ, ಅಶೋಕ್ ಶೆಟ್ಟಿ ಮುಂಬೈ, ಸಚಿನ್ ಪುತ್ರನ್, ಸುದರ್ಶನ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
23/10/2020 03:29 pm