This is a modal window.
Beginning of dialog window. Escape will cancel and close the window.
End of dialog window.
ಮಂಗಳೂರು: ವಿಕಲಚೇತನರಿಗೆ ಶಾಶ್ವತ ಆಶ್ರಯ ಒದಗಿಸುವ ನಿಟ್ಟಿನಲ್ಲಿ ಬಂಟ್ವಾಳ ತಾಲೂಕಿನ ನರಿಂಗಾನ ಗ್ರಾಮದ ಮೊಂಟೆಪದವಿನಲ್ಲಿ 'ಇನ್ಫೋಸಿಸ್ ಫೌಂಡೇಶನ್ ಸೇವಾಭಾರತಿ ದಿವ್ಯಾಂಗ ಸೇವಾ ಸಮುಚ್ಛಯ'ದ ಶಂಕುಸ್ಥಾಪನೆ ಕಾರ್ಯಕ್ರಮ ಶುಕ್ರವಾರ ನಡೆಯಿತು. ಮಂಗಳೂರಿನ ಸೇವಾಭಾರತಿ ಟ್ರಸ್ಟ್ ಇನ್ಫೋಸಿಸ್ ಫೌಂಡೇಶನ್ ಬೆಂಗಳೂರು ಇದರ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು.
ಇನ್ಫೋಸಿಸ್ ಫೌಂಡೇಶನ್ ಸೇವಾ ಭಾರತಿ ಕ್ಯಾಂಪಸ್ ಫಾರ್ ದಿವ್ಯಾಂಗದ ಸಮುಚ್ಛಯದ ಕಾಮಗಾರಿ 18 ತಿಂಗಳಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಆರ್ ಎಸ್ ಎಸ್ ಮುಖಂಡ ಡಾ.ಕಲ್ಲಡ್ಕ ಪ್ರಭಾಕರ್ ಭಟ್,
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡ್, ಬಿಜೆಪಿ ಮುಖಂಡ ಸಂತೋಷ್ ಬೋಳಿಯಾರ್ ಸೇರಿ ಸೇವಾ ಭಾರತಿ ಟ್ರಸ್ಟ್ ನ ಪದಾಧಿಕಾರಿಗಳು ಹಾಗೂ ಇನ್ಫೋಸಿಸ್ ನ ಅಧಿಕಾರಿಗಳು ಉಪಸ್ಥಿತರಿದ್ದರು.
Kshetra Samachara
23/10/2020 01:50 pm