ಕಾಪು : ಸನಾತನ ಹಿಂದೂ ಧರ್ಮವೇ ನಮ್ಮ ದೇಶದ ಭದ್ರತೆಗೆ ಭದ್ರ ಬುನಾದಿಯಾಗಿದ್ದು ಹಿಂದೂ ರಾಷ್ಟ್ರ ನಿರ್ಮಾಣ ಸಂಕಲ್ಪಕ್ಕೆ ನಾವೆಲ್ಲರೂ ಪಣ ತೋಡಬೇಕಾಗಿದೆ ಎಂದು ಮುಂಬಯಿಯ ಆಧ್ಯಾತ್ಮಿಕ ಚಿಂತಕ,ಶಿವ ತಾಂಡವ ಸ್ತೋತ್ರ ಖ್ಯಾತಿಯ ಕಾಳಿ ಚರಣ್ ಮಹಾರಾಜ್ ಸ್ವಾಮೀಜಿ ಹೇಳಿದರು.
ಕಳತ್ತೂರು ಗುರ್ಮೆಯಲ್ಲಿ ಬುಧವಾರ ಬಿಜೆಪಿ ಕಾರ್ಯಕರ್ತರು ಮತ್ತು ಶಿಷ್ಯ ವೃಂದದವರಿಗೆ ಅವರು ಆಶೀರ್ವಚನ ನೀಡಿದರು.ರಾಷ್ಟ್ರ ಜಾಗೃತಿ ಮತ್ತು ದೇಶದ ಸುರಕ್ಷತೆಗಾಗಿ ಬಿಜೆಪಿ ನಿರಂತರವಾಗಿ ಶ್ರಮಿಸುತ್ತಿದ್ದು ಪಕ್ಷವನ್ನು ಇನ್ನಷ್ಟು ಬಲಶಾಲಿಗೊಳಿಸುವಲ್ಲಿ ದೇಶದ ಜನತೆ ಬೆಂಬಲ ನೀಡುವ ಅಗತ್ಯತೆ ಇದೆ.
ಸಾಧು ಸಂತರು ಮತ್ತು ಶ್ರೇಷ್ಟ್ರ ಸಂಸ್ಕಾರವಂತರ ಆಶೀರ್ವಾದವೇ ನಮಗೆಲ್ಲರಿಗೂ ಶ್ರೀರಕ್ಷೆಯಾಗಿದೆ ಎಂದರು.ಬಿಜೆಪಿ ಹಿರಿಯ ಮುಖಂಡ ಮತ್ತು ಸಮಾಜ ಸೇವಕ ಸುರೇಶ್ ಪಿ. ಶೆಟ್ಟಿ ಗುರ್ಮೆ ಮತ್ತು ಸತೀಶ್ ಪಿ. ಶೆಟ್ಟಿ ಗುರ್ಮೆ ಅವರು ಕಾಳಿ ಚರಣ್ ಮಹಾರಾಜ್ ಸ್ವಾಮೀಜಿ ಅವರನ್ನು ಸಮ್ಮಾನಿಸಿ, ಗೌರವಿಸಿದರು.
ವಂದೇ ಮಾತರಂ ಸಹಿತ ದೇಶ ಭಕ್ತಿಯನ್ನು ಸೃಜಿಸುವ ವಿವಿಧ ಶ್ಲೋಕಗಳನ್ನು ಅವರು ಪಠಿಸಿದರು.ಬಿಜೆಪಿ ಹಿರಿಯ ಮುಖಂಡ ಸುರೇಶ್ ಶೆಟ್ಟಿ ಗುರ್ಮೆ, ಉದ್ಯಮಿಗಳಾದ ಅಭಿಷೇಕ್ ಭಂಡಾರಿ ಮೂಲ್ಕಿ, ಪ್ರತೀಕ್ ಶೆಟ್ಟಿ ಮೂಲ್ಕಿ, ಸತೀಶ್ ಪಿ. ಶೆಟ್ಟಿ ಗುರ್ಮೆ, ಜಿ.ಪಂ. ಸದಸ್ಯೆ ರೇಷ್ಮಾ ಉದಯ್ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ಶ್ರೀಶ ನಾಯಕ್ ಪೆರ್ಣಂಕಿಲ, ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ವೀಣಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
Kshetra Samachara
22/10/2020 09:55 pm