ಮುಲ್ಕಿ:ಸಹಕಾರಿ ಭೀಷ್ಮ, ಬಿಲ್ಲವ ಸಮಾಜದ ನೇತಾರ, ಬಡವರ ಆಶಾಕಿರಣ, ಅಭಿವೃದ್ಧಿಯ ಹರಿಕಾರರ ಭಾರತ್ ಬ್ಯಾಂಕ್ ನ ಅಧ್ಯಕ್ಷರು, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀ ಜಯ ಸಿ ಸುವರ್ಣರವರಿಗೆ ಮುಲ್ಕಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಹಳೆಯಂಗಡಿಯ ಹರಿ ಓಂ ಸಭಾಭವನದಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು. ಸಭೆಯಲ್ಲಿ ಕರ್ನಾಟಕ ಸರಕಾರದ ಮಾಜೀ ಸಚಿವರಾದ ಕೆ. ಅಭಯಚಂದ್ರ,ಮಾತನಾಡಿ ಜಯ ಸುವರ್ಣರು ಬ್ಯಾಂಕ್ ಉದ್ಯಮದ ಮುಖಾಂತರ ಅನೇಕ ಸಮಾಜದವರಿಗೆ ಉದ್ಯೋಗ ನೀಡಿ ಬಡವರ ಕಣ್ಣೀರು ಒರೆಸುವ ಕೊಡುಗೈ ದಾನಿ ಯಾಗಿದ್ದರು.
ಸರಳ ಸಜ್ಜನಿಕೆಯ ವ್ಯಕ್ತಿಯಾಗಿ ಎಲ್ಲರ ಪ್ರೀತಿ ಪಾತ್ರರಾಗಿದ್ದರು, ಅವರ ಆದರ್ಶಗಳು ಇಂದಿನ ಯುವಕರಿಗೆ ಮಾದರಿಯಾಗಲಿ ಎಂದು ಹೇಳಿದರು. ದಕ್ಷಿಣ ಕನ್ನಡ ಜಿಲ್ಲೆ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಮಾತನಾಡಿ ಜಯ ಸುವರ್ಣರು ಬಡವರ ಪಾಲಿನ ಆಶಾಕಿರಣ ವಾಗಿದ್ದು ಅನೇಕ ಶಿಕ್ಷಣ ಸಂಸ್ಥೆಗಳ ಹಾಗೂ ಬ್ಯಾಂಕಿಂಗ್ ಉದ್ಯಮದ ಮೂಲಕ ವಿದ್ಯಾರ್ಥಿಗಳ , ನಿರುದ್ಯೋಗಿಗಳ ಪಾಲಿನ ಆಶಾಕಿರಣವಾಗಿದ್ದರು ಎಂದು ಹೇಳಿದರು.ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಮಟ್ಟು ಮಾತನಾಡಿ ಬಿಲ್ಲವ ಸಮಾಜದ ನಾಯಕನಾಗಿದ್ದು ಸಮಾಜಕ್ಕೆ ಅವರ ಕೊಡುಗೆ ಅಪಾರ ಎಂದು ಹೇಳಿದರು.
ಕೆಪಿಸಿಸಿ ಹಿಂದುಳಿದ ವರ್ಗ ವಿಭಾಗದ ಪ್ರಧಾನ ಕಾರ್ಯದರ್ಶಿ ಗುರುರಾಜ ಎಸ್ ಪೂಜಾರಿ, ಕಾಂಗ್ರೆಸ್ ನಾಯಕರಾದ ಪ್ರಮೋದ್ ಕುಮಾರ್, ಬಾಲಾದಿತ್ಯ ಆಳ್ವ ಮತ್ತಿತರರು ಜಯ ಸುವರ್ಣರ ಆದರ್ಶಗಳ ಬಗ್ಗೆ ಮಾತನಾಡಿದರು, ಸಭೆಯಲ್ಲಿ ಪ್ರಸಾದ್ ಮಲ್ಲಿ,ಯುವ ಕಾಂಗ್ರೆಸ್ ಅಧ್ಯಕ್ಷ ಹಕೀಂ ಕಾರ್ನಾಡ್, ಮುಲ್ಕಿ-ಮೂಡಬಿದ್ರೆ ಇಂಟಕ ಅಧ್ಯಕ್ಷ ಮೋಹನ್ ಕೋಟ್ಯಾನ್ ಶಿಮಂತೂರು, ಮುಲ್ಕಿ ನಗರ ಪಂಚಾಯತ್ ಸದಸ್ಯ ಪುತ್ತುಬಾವ, ಬಶೀರ್ ಕುಳಾಯಿ, ಶಶೀಂದ್ರ ಸಾಲ್ಯಾನ್ ಹಳೆಯಂಗಡಿ, ವಿಲ್ಹೆಮ್ ಮಾಬೆನ್,ಅಶೋಕ್ ಪೂಜಾರ, ಮಯ್ಯದ್ದಿ ಪಕ್ಷಿಕೆರೆ, ದಯಾನಂದ ಮಟ್ಟು, ಧರ್ಮಾನಂದ ತೋಕೂರು, ಅಶ್ವಿನ್ ಆಳ್ವ, ಉಮೇಶ್ ಪೂಜಾರಿ, ಯುವ ಇಂಟಕ್ ಅಧ್ಯಕ್ಷ ಚಿರಂಜೀವಿ ಅಂಚನ್, ದಿನೇಶ್ ಸುವರ್ಣ, ಪ್ರವೀಣ್ ಸಸಿಹಿತ್ಲು, ಪದ್ಮಾವತಿ ಶೆಟ್ಟಿ, ವಾಮನ ಪೂಜಾರಿ, ನಾರಾಯಣ ಕುಂದರ್, ಇಸುಬು ಹಳೆಯಂಗಡಿ, ಅಣ್ಣು ಕೋಟ್ಯಾನ್ ಮೈಲೊಟ್ಟು, ಗಿರೀಶ್ ಅಂಚನ್ ಶಿಮಂತೂರ್,ಸವಿತಾ ಬೆಳ್ಳಾಯರು, ಕಾಂಗ್ರೆಸ್ ಸಾಮಾಜಿಕ ಜಾಲತಾಣದ ರಕ್ಷಿತ್ ಕೊಳಚಿಕಂಬಳ, ಹರೀಶ್ ಸುವರ್ಣ ಕೊಳಚಿಕಂಬಳ, ಪ್ರಕಾಶ್ ಆಚಾರ್ಯ ಕಿನ್ನಿಗೋಳಿ, ಚಂದ್ರಶೇಖರ ಗೋಳಿಜೋರ, ಸಂತೋಷ್ ಕುಮಾರ್ ಕಿನ್ನಿಗೋಳಿ, ಮತ್ತಿತರರು ಉಪಸ್ಥಿತರಿದ್ದರು. ವಸಂತ ಬೆರ್ನಾಡ್ ಸ್ವಾಗತಿಸಿದರು. ಧನಂಜಯ ಮಟ್ಟು ಧನ್ಯವಾದ ಅರ್ಪಿಸಿದರು. ಕಾರ್ಯಕ್ರಮದಲ್ಲಿ ಜಯ ಸುವರ್ಣರ ಆತ್ಮಕ್ಕೆ ಕಿರಣ್ ಶಾಂತಿಗಾಗಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು
Kshetra Samachara
22/10/2020 03:12 pm