ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಜಯ ಸಿ ಸುವರ್ಣ ಅವರಿಗೆ ಶೃದ್ದಾಂಜಲಿ

ಮುಲ್ಕಿ: ಮುಲ್ಕಿ ನಾರಾಯಣಗುರು ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ನಿಧನರಾದ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಜಯ ಸಿ ಸುವರ್ಣ ರವರಿಗೆ ಶೃದ್ದಾಂಜಲಿ ಅರ್ಪಣೆ ಕಾರ್ಯಕ್ರಮ ಸಂಸ್ಥೆಯಲ್ಲಿ ನಡೆಯಿತು.ಸಭೆಯಲ್ಲಿ ಸಂಸ್ಥೆಗಳ ಸಂಚಾಲಕ ಎಚ್ ವಿ ಕೋಟ್ಯಾನ್ ಮಾತನಾಡಿ ಕಳೆದ ಮೂವತ್ತು ವರ್ಷಗಳಿಂದ ಶ್ರೀ ನಾರಾಯಣಗುರು ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಅಧ್ಯಕ್ಷರಾಗಿ ಸಂಸ್ಥೆಯ ಆಗುಹೋಗುಗಳಿಗೆ ಬಹಳಷ್ಟು ಶ್ರಮಿಸಿದ್ದರು ಅವರ ಆದರ್ಶಗಳು ಅನುಕರಣೀಯ ವಾಗಲಿ ಎಂದು ಹೇಳಿದರು.,

ಆಡಳಿತ ಮಂಡಳಿಯ ಸದಸ್ಯ ಬಾಲಚಂದ್ರ ಸನಿಲ್ ಮಾತನಾಡಿ ಶೈಕ್ಷಣಿಕ ಸಂಸ್ಥೆಗಳ ಬಗ್ಗೆ ಅಪಾರ ಕಾಳಜಿ ವಹಿಸಿದ್ದ ಜಯ ಸುವರ್ಣರು ಶಿಕ್ಷಕರ ಮೇಲೆ ಅಪಾರ ಅಭಿಮಾನ ಬಿಟ್ಟು ಕೊರೋನಾ ದಿನಗಳಲ್ಲಿಯೂ ಶಿಕ್ಷಣಕ್ಕೆ ಪ್ರೋತ್ಸಾಹ ಕಡಿಮೆಯಾಗದಂತೆ ನೋಡಿಕೊಂಡ ಮಹಾನ್ ವ್ಯಕ್ತಿ ಎಂದು ಹೇಳಿದರು.ಮುಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ರಮೇಶ್ ಕೊಕ್ಕರಕಲ್ಲು, ಉಪಾಧ್ಯಕ್ಷ ಸತೀಶ್ ಅಂಚನ್,ಕೋಶಾಧಿಕಾರಿ ಪ್ರಕಾಶ್ ಸುವರ್ಣ,ಮಾಜೀ ಅಧ್ಯಕ್ಷ ಗೋಪಿನಾಥ ಪಡ೦ಗ, ಯತೀಶ್ ಅಮೀನ್ ಕೊಕ್ಕರ ಕಲ್ಲು,ಮುಲ್ಕಿ ಬಿಲ್ಲವ ಮಹಾಮಂಡಲದ ಯೋಗೀಶ್ ಕೋಟ್ಯಾನ್, ಸಂಸ್ಥೆಯ ಟ್ರಸ್ಟಿ ಪ್ರಮೋದ್ ಕುಮಾರ್ ಕಿನ್ನಿಗೋಳಿ,ವಾಸು ಪೂಜಾರಿ, ಗೋವಿಂದ ಕೋಟ್ಯಾನ್, ಡಾ.ಹರಿಶ್ಚಂದ್ರ ಸಾಲಿಯಾನ್, ವಿಜಯಕುಮಾರ್ ಕುಬೆವೂರು, ಮುಲ್ಕಿ ಬಿಲ್ಲವ ಸಂಘದ ಮಹಿಳಾ ಮಂಡಳಿಯ ಅಂಬಾವತಿ, ಸರೋಜಿನಿ ಸುವರ್ಣ, ಹೇಮರಾಜ ಸಾಲಿಯಾನ್ ಪಯ್ಯೊಟ್ಟು, ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರಾದ ಯತೀಶ್ ಅಮೀನ್ ಮಂಗಳೂರು, ಪ್ರಾಥಮಿಕ ಶಿಕ್ಷಣ ಸಂಸ್ಥೆಯ ಮುಖ್ಯೋಪಾಧ್ಯಾಯ ಕೇಶವ ಎಚ್. ಮತ್ತಿತರರು ಇದ್ದರು.

Edited By : Nagesh Gaonkar
Kshetra Samachara

Kshetra Samachara

22/10/2020 12:56 pm

Cinque Terre

15.97 K

Cinque Terre

0

ಸಂಬಂಧಿತ ಸುದ್ದಿ