ಉಡುಪಿ: ಅಭಿನೇತ್ರಿ ಆರ್ಟ್ಸ್ ಟ್ರಸ್ಟ್ ನೀಲ್ಕೋಡ್ ವತಿಯಿಂದ ಇದೇ ತಿಂಗಳ 27 ರಂದು ಯಕ್ಷಗಾನ ಕಲಾವಿದರಿಗೆ ಕೊಡಮಾಡುವ ಕಣ್ಣಿ ಪ್ರಶಸ್ತಿ ಮತ್ತು ಅಭಿನೇತ್ರಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಅಭಿನೇತ್ರಿ ಟ್ರಸ್ಟ್ ಕಲಾವಿದ ನೀಲ್ಕೋಡ ಶಂಕರ ಹೆಗಡೆ ಹೇಳಿದ್ದಾರೆ.
ಉಡುಪಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಶಂಕರ ಹೆಗಡೆ,ವಾರ್ಷಿಕ ಕಣ್ಣಿ ಪ್ರಶಸ್ತಿಗೆ ಹಿರಿಯ ಕಲಾವಿದ ಗೋಪಾಲ ಆಚಾರ್ ತೀರ್ಥಹಳ್ಳಿ, ಅಭಿನೇತ್ರಿ ಪ್ರಶಸ್ತಿಗೆ ಎಂ ಕೆ ರಮೇಶ್ ಆಚಾರ್ ಹಾಗೂ ಪ್ರಸಾದ್ ಮೊಗೆಬೆಟ್ಟು ಇವರಿಗೆ ಗೌರವ ಸನ್ಮಾನ ಅರ್ಪಿಸಲಾಗುವುದು ಎಂದು ಹೇಳಿದರು. ಅಕ್ಟೋಬರ್ 27 ರಂದು ಸಂಜೆ 4:30 ಕ್ಕೆ ಯಕ್ಷಾರಾಧನೆ : ರಂಗಮಹೋತ್ಸವ ಎಂಬ ಶೀರ್ಷಿಕೆಯಲ್ಲಿ ಉಡುಪಿ ಮಥುರಾ ಛತ್ರದಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದ ಉದ್ಘಾಟಕರಾಗಿ ಜಯಕರ್ ಶೆಟ್ಟಿ ಇಂದ್ರಾಳಿ, ಅಧ್ಯಕ್ಷರಾಗಿ ಡಾ.ನಾರಾಯಣ ಸಭಾಹಿತ,ಅತಿಥಿಗಳಾಗಿ ಯಶಪಾಲ್ ಸುವರ್ಣ, ಕಿಶೋರ್ ಕುಮಾರ್ ಹೆಗ್ಡೆ, ಕೃಷ್ಣಮೂರ್ತಿ ಆಚಾರ್ಯ ಮತ್ತಿತರ ಗಣ್ಯರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ. ಇದೇ ಸಂದರ್ಭ ಸುಬ್ರಹ್ಮಣ್ಯ ಧಾರೇಶ್ವರ ಅಭಿನಂದನಾ ನುಡಿಗಳೊಂದಿಗೆ ನಿತ್ಯಾನಂದ ನಿರೂಪಣೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ನಂತರ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಪ್ರಸಾದ್ ಕುಮಾರ್ ಮೊಗೆಬೆಟ್ಟು ವಿರಚಿತ ಐತಿಹಾಸಿಕ ಯಕ್ಷಗಾನ ಹಾಸ್ಯರತ್ನ ತೆನಾಲಿ ರಾಮಕೃಷ್ಣ ಪ್ರದರ್ಶನಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
Kshetra Samachara
21/10/2020 06:12 pm