ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಮನೆ-ಮನೆಗಳಲ್ಲಿ ನವರಾತ್ರಿ ಭಜನೆ, ಸಂಕೀರ್ತನೆಯ " ಭಕ್ತಿಲೋಕ" ಅನಾವರಣ

ಕು‌ಂದಾಪುರ: ದೇಶಾದ್ಯಂತ ನವರಾತ್ರಿ ಉತ್ಸವದ ರೀತಿ-ರಿವಾಜು ಭಿನ್ನವಾಗಿರುತ್ತದೆ. ಆದರೆ, ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಾದ್ಯಂತ ಕೂಡ ವಿಶೇಷವಾಗಿ ಮನೆಯಲ್ಲಿ ನವರಾತ್ರಿಯ ಆಚರಣೆ ಮಾಡಲಾಗುತ್ತದೆ.

ವಿಶೇಷ ಸಂಗೀತ ಕಾರ್ಯಕ್ರಮ ಆಯೋಜಿಸಿ ಭಜನೆಯ ಮೂಲಕ ಶ್ರೀ ದೇವಿಯ ಭಕ್ತಿಗೆ ಪಾತ್ರರಾಗುತ್ತಾರೆ. ಮನೆಯಲ್ಲಿ ನವರಾತ್ರಿ ದೇವಿಯ ಮೂರ್ತಿ ಕೂರಿಸಿ ಭಜನೆ, ಸಂಕೀರ್ತನೆ ಮೂಲಕ ಕುಟುಂಬ ಸಮೇತವಾಗಿ ಒಂಬತ್ತು ದಿನಗಳ ಕಾಲ ಪೂಜೆ ಸಲ್ಲಿಸುತ್ತಾರೆ.

ಕುಂದಾಪುರದ ಲಕ್ಷ್ಮಿ ನಾಗೇಶ್ ಭಟ್ ಅವರ ಮನೆಯಲ್ಲಿ ಪುರೋಹಿತ ಪಾಂಡುರಂಗ ತಲ್ಲೂರು ನೇತೃತ್ವದಲ್ಲಿ ಶ್ರೀ ಶಾಂತೇರಿ ಕಾಮಾಕ್ಷಿ ಭಜನಾ ಮಂಡಳಿ ಹಾರ್ಮಣ್ ವತಿಯಿಂದ ಮನೆಯಲ್ಲಿ ಭಜನೋತ್ಸವ ನಡೆಯಿತು.

ವಿಶೇಷ ಎನ್ನುವಂತೆ ಹಾರ್ಮೋನಿಯಂ ಮೂಲಕ ಮನೆಮಂದಿಯೂ ದೇವಿಯ ಭಜನೆ ಮಾಡಿ ನವರಾತ್ರಿ ಆಚರಿಸಿದರು.

ನವರಾತ್ರಿ ವಿಶೇಷತೆಯ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಾದ್ಯಂತ ಕೊರೊನಾ ಹಾವಳಿ ಇದ್ದರೂ ಹಬ್ಬದ ಸಡಗರದ ವಾತಾವರಣ ಕಮ್ಮಿಯಾಗಿಲ್ಲ.

9 ದಿನಗಳ ಕಾಲ ನಾನಾ ದೇವಸ್ಥಾನಗಳು ಹಾಗೂ ಮನೆ-ಮನೆಗಳಲ್ಲಿ ಹಬ್ಬದ ಭಕ್ತಿ ವಾತಾವರಣ ನೋಡುವುದೇ ಒಂದು ರೀತಿ ಖುಷಿ.

Edited By : Nirmala Aralikatti
Kshetra Samachara

Kshetra Samachara

20/10/2020 09:03 am

Cinque Terre

16.61 K

Cinque Terre

1

ಸಂಬಂಧಿತ ಸುದ್ದಿ