ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಿನಿ ವಿಧಾನಸೌಧ ದೋಷ ಪರಿಹಾರಕ್ಕೆ ಬಿ.ಸಿ.ರೋಡಿನಲ್ಲಿ ಮಹಾಮೃತ್ಯುಂಜಯ ಹೋಮ

ಬಂಟ್ವಾಳ: ಬಂಟ್ವಾಳ ಮಿನಿ ವಿಧಾನಸೌಧದಲ್ಲಿ ದೋಷ ಪರಿಹಾರಕ್ಕಾಗಿ ಜಿಲ್ಲಾ ಪಂಚಾಯಿತಿ ಸದಸ್ಯ ತುಂಗಪ್ಪ ಬಂಗೇರ ನೇತೃತ್ವದಲ್ಲಿ ಬಿ.ಸಿ.ರೋಡಿನ ಶ್ರೀ ರಕ್ತೇಶ್ವರಿ ದೇವಿ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಹೋಮ ಸೋಮವಾರ ನಡೆಯಿತು.

ಮಿನಿವಿಧಾನಸೌಧದಲ್ಲಿ ಕಾರ್ಯಾಚರಿಸುತ್ತಿರುವ ಕಂದಾಯ ಇಲಾಖೆಯ ಇಬ್ಬರು ಉಪತಹಶೀಲ್ದಾರರು ಬೆರಳೆಣಿಕೆಯ ದಿನಗಳ ಮಧ್ಯದಲ್ಲಿ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಈ ಹೋಮವನ್ನು ಮಾಡಲಾಗಿದೆ. ಮಿನಿವಿಧಾನಸೌಧಕ್ಕೆ ವಾಸ್ತುದೋಷ ಮತ್ತು ಈ ಪ್ರದೇಶದಲ್ಲಿ ನಾಗನಡೆ ಇರುವ ವಿಚಾರ ಪ್ರಶ್ನಾಚಿಂತನೆಯಲ್ಲಿ ಕಂಡುಬಂದಿದೆ.

ಕಳೆದ ಸೆಪ್ಟಂಬರ್ ತಿಂಗಳಲ್ಲಿ ಉಪತಹಶೀಲ್ದಾರ್ ಗಳಿಬ್ಬರು ನಿಧನಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಕಾರಿಂಜ ಕಳ್ಳಿಮಾರು ಜೋತಿಷ್ಯಿ ವೆಂಕಟರಮಣ ಮುಚ್ಚಿನ್ನಾಯರಲ್ಲಿ ಪ್ರಶ್ನಾ ಚಿಂತನೆ ನಡೆಸಿದ್ದು, ಅದರಲ್ಲಿ ಕಂಡುಬಂದಂತೆ ಇದೀಗ ಬಂಟ್ವಾಳ ದೋಷ ನಿವಾರಣೆ ಮತ್ತು ಫಲ ಪ್ರಾಪ್ತಿಗಾಗಿ ಮೃತ್ಯುಂಜಯ ಹೋಮಗಳನ್ನು ನಡೆಸಲಾಗಿದೆ ಎಂದು ಈ ಸಂದರ್ಭ ತುಂಗಪ್ಪ ಬಂಗೇರ ಹೇಳಿದರು.

ಉಡುಪಿ ಚಂದ್ರ ಮೌಳೀಶ್ವರ ದೇವಸ್ಥಾನದ ಅರ್ಚಕರಾದ ಮನೋಹರ ತಂತ್ರಿಯವರ ನೇತೃತ್ವದಲ್ಲಿ ಮತ್ತು ಬಿ.ಸಿ.ರೋಡು ರಕ್ತೇಶ್ವರಿ ದೇವಿ ದೇವಸ್ಥಾನದ ಅರ್ಚಕರಾದ ರಘುಪತಿ ಭಟ್ ರ ಪೌರೋಹಿತ್ಯದಲ್ಲಿ ಮೃತ್ಯಂಜಯ ಹೋಮ ಮತ್ತು ವೈದಿಕ ವಿಧಿ ವಿಧಾನಗಳು ಬಿ.ಸಿ.ರೋಡು ರಕ್ತೇಶ್ವರಿ ದೇವಸ್ಥಾನದಲ್ಲಿ ನಡೆಯಿತು.

ಹೋಮ ಆಯೋಜಿಸಿದ ಜಿಪಂ ಸದಸ್ಯ ತುಂಗಪ್ಪ ಬಂಗೇರ ಜತೆಗೆ ಪೂರ್ಣಾಹುತಿ ವೇಳೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಜಿಪಂ ಸದಸ್ಯರಾದ ರವಿಂದ್ರ ಕಂಬಳಿ, ಕಮಲಾಕ್ಷಿ ಪೂಜಾರಿ, ಶಂಕರ್ ಬೆದ್ರಮಾರ್ ಪ್ರಮುಖರಾದ ದೇವಪ್ಪ ಪೂಜಾರಿ, ಡೊಂಬಯ್ಯ ಅರಳ, ಸಂತೋಷ್, ಪ್ರಭಾಕರ ಪಿ.ಎಂ. ಬಂಟ್ವಾಳ ತಾಲೂಕು ಕಚೇರಿ ಸಿಬ್ಬಂದಿ ಉಪಸ್ಥಿತರಿದ್ದರು.

Edited By :
Kshetra Samachara

Kshetra Samachara

19/10/2020 04:17 pm

Cinque Terre

9.15 K

Cinque Terre

0

ಸಂಬಂಧಿತ ಸುದ್ದಿ