ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಯುವ ಜನಾಂಗ ಕೃಷಿ ಉಳಿಸಲು ಪಣ ತೊಡಬೇಕು: ಧರ್ಮದರ್ಶಿ ಹರಿಕೃಷ್ಣ ಪುನರೂರು

ಮುಲ್ಕಿ: ಹಳೆಯಂಗಡಿ ಲಯನ್ಸ್ ಮತ್ತು ಲಿಯೋ ಕ್ಲಬ್ ಹಾಗೂ ಪಾವಂಜೆ ನಿನಾದ ಸಂಸ್ಕೃತಿ ಅಧ್ಯಯನ ಕೇಂದ್ರ ಸಂಯುಕ್ತ ಆಶ್ರಯದಲ್ಲಿ ಪಾವಂಜೆ ನಿನಾದ ರಂಗಮಂದಿರದಲ್ಲಿ "ಬುಲೆ ಪರ್ಬ - ತುಳುವೆರ ಯೋಗ ಭಾಗ್ಯ" ಕಾರ್ಯಕ್ರಮ ನಡೆಯಿತು.

ಕೃಷಿಕ ಹಾಗೂ ಜನಪದ ವಿದ್ವಾಂಸ ಡಾ. ಗಣೇಶ್ ಅಮೀನ್ ಸಂಕಮಾರ್ ನೇತೃತ್ವದಲ್ಲಿ ಗದ್ದೆಯಿಂದ ತೆನೆ ತೆಗೆದು ಸಮೃದ್ಧ ಬೆಳೆಗೆ ಪ್ರಾರ್ಥನೆ ಹಾಗೂ ಪೂಜೆ ಸಲ್ಲಿಸುವ ಮೂಲಕ "ಬುಲೆ ಪರ್ಬ" ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಅಧ್ಯಕ್ಷತೆಯನ್ನು ಧರ್ಮದರ್ಶಿ ಹರಿಕೃಷ್ಣ ಪುನರೂರು ವಹಿಸಿ ಮಾತನಾಡಿ, ಇಂದಿನ ಯುವ ಜನಾಂಗ ಕೃಷಿಯ ಮಹತ್ವ ಅರಿತು, ವಿಶೇಷ ಆಸಕ್ತಿ ವಹಿಸಿ ಕೃಷಿ ಉಳಿಸಲು ಪಣತೊಡಬೇಕು ಎಂದರು. ಸಂಪನ್ಮೂಲ ವ್ಯಕ್ತಿಯಾಗಿ ಕೆಂಚನಕೆರೆ ಯೋಗೋಪಾಸನ ಯೋಗಗುರು ಜಯ ಮುದ್ದು ಶೆಟ್ಟಿ ಮಾತನಾಡಿ, ಹಿರಿಯರ ಆರೋಗ್ಯ ಸಂಪತ್ತು ಮತ್ತು ಯೋಗ ವಿದ್ಯೆ ಬಗ್ಗೆ ಮಾಹಿತಿ ನೀಡಿ ಜೀವನದಲ್ಲಿ ಹೋರಾಟ ಮುಖ್ಯ. ಯೋಗದಿಂದ ಎಲ್ಲವೂ ಸಾಧ್ಯ, ನಮ್ಮ ಬದುಕು ಎಲ್ಲರಿಗೂ ಆದರ್ಶವಾಗಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಲಯನ್ ವಲಯಾಧ್ಯಕ್ಷ ಮಾಧವ ಎನ್ ಶೆಟ್ಟಿ, ಹಳೆಯಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಶರತ್, ಲಿಯೋ ಅಧ್ಯಕ್ಷ ಚಿರಾಗ್ ಕೋಟ್ಯಾನ್, ಲಯನ್ಸ್ ಪದಾಧಿಕಾರಿಗಳಾದ ಚಂದ್ರಶೇಖರ ನಾನಿಲ್, ದಾಮೋದರ ಸಾಲ್ಯಾನ್, ಯಶೋಧರ ಸಾಲ್ಯಾನ್, ರಮೇಶ್ ರಾಥೋಡ್, ಭಾಸ್ಕರ ಸಾಲ್ಯಾನ್, ಜಯಶ್ರೀ ನಾನಿಲ್, ಮೋಹನ್ ಸುವರ್ಣ, ಸೌರಭ್ ಸಾಲ್ಯಾನ್, ವಾಸು ನಾಯಕ್, ಲಿಯೋ ಪ್ರಜ್ವಲ್, ಪ್ರತೀಕ್ ಮತ್ತಿತರರು ಉಪಸ್ಥಿತರಿದ್ದರು. ಯೋಗಗುರು ಜಯ ಮುದ್ದು ಶೆಟ್ಟಿ ಅವರನ್ನು ಸಾಧಕರ ನೆಲೆಯಲ್ಲಿ ಗೌರವಿಸಲಾಯಿತು. ಯಾದವ ದೇವಾಡಿಗ ಸ್ವಾಗತಿಸಿದರು. ಪಾವಂಜೆ ನಿನಾದ ಸಂಸ್ಕೃತಿ ಅಧ್ಯಯನ ಕೇಂದ್ರದ ಡಾ. ಗಣೇಶ್ ಅಮೀನ್ ಸಂಕಮಾರ್ ಪ್ರಸ್ತಾವನೆಗೈದರು. ಅನು ಮತ್ತು ಭವ ನಿರೂಪಿಸಿದರು

Edited By : Nagesh Gaonkar
Kshetra Samachara

Kshetra Samachara

18/10/2020 02:38 pm

Cinque Terre

15.25 K

Cinque Terre

2

ಸಂಬಂಧಿತ ಸುದ್ದಿ