ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಇಂಟರಾಕ್ಟ್ ಶಾಲಾ ಶಿಕ್ಷಕರಿಗೆ ಆನ್ ಲೈನ್ ಪ್ರತಿಭಾ ಸ್ಪರ್ಧೆ, ಬಹುಮಾನ ವಿತರಣೆ

ಮುಲ್ಕಿ: ಮುಲ್ಕಿ ರೋಟರಿ ಕ್ಲಬ್ ವತಿಯಿಂದ ಇಂಟರಾಕ್ಟ್ ಶಾಲಾ ಶಿಕ್ಷಕರಿಗೆ ನಡೆದ ಆನ್ಲೈನ್ ಪ್ರತಿಭಾ ಸ್ಪರ್ಧೆಯ ಬಹುಮಾನ ವಿತರಣೆ ಮುಲ್ಕಿ ರೋಟರಿ ಕ್ಲಬ್ ಶತಾಬ್ದಿ ಭವನದಲ್ಲಿ ನಡೆಯಿತು. ಅಧ್ಯಕ್ಷತೆಯನ್ನು ಜೇಸಿಐ ರಾಷ್ಟ್ರೀಯ ತರಬೇತುದಾರ ಹಾಗೂ ಮಂಗಳೂರಿನ ಸ್ವಾಸ್ತಿಕ ನ್ಯಾಷನಲ್ ಸ್ಕೂಲ್ ನ ಪ್ರಾಂಶುಪಾಲರಾದ ರಾಜೇಶ್ವರಿ ಡಿ.ಶೆಟ್ಟಿ ವಹಿಸಿ ಮಾತನಾಡಿ, ಪ್ರತಿಭೆ ಗುರುತಿಸಲು ರೋಟರಿ ಕ್ಲಬ್ ಸೂಕ್ತ ವೇದಿಕೆಯಾಗಿದ್ದು, ಕೊರೊನಾ ದಿನಗಳಲ್ಲಿ ಮುಲ್ಕಿ ರೋಟರಿಯ ಕಾರ್ಯವೈಖರಿ ಶ್ಲಾಘಿಸಿ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ರೋಟರಿ ಉಪರಾಜ್ಯಪಾಲ ಬಾಲಕೃಷ್ಣ ಶೆಟ್ಟಿ ಕಳ್ಳಿಗೆ, ರೋಟರಿ ವಲಯ ಸೇನಾನಿ ನಾರಾಯಣ್, ಕಿನ್ನಿಗೋಳಿ ರೋಟರಿ ಕ್ಲಬ್ ಅಧ್ಯಕ್ಷ ಯಶವಂತ ಐಕಳ, ಮುಲ್ಕಿ ರೋಟರಿ ಕ್ಲಬ್ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ ಯಶವಂತ ಎನ್. ಸಾಲ್ಯಾನ್, ಪ್ರೀತಮ್ ಕುಮಾರ್, ಲಿಯಾಕತ್ ಆಲಿ, ಕಾರ್ಯಕ್ರಮ ಸಂಘಟಕರಾದ ರವಿಚಂದ್ರ ರಾವ್, ನರೇಂದ್ರ ಕೆರೆಕಾಡು, ಮಲ್ಲಿಕಾರ್ಜುನ ಆರ್ ಕೆ., ಕಾರ್ಯಕ್ರಮದ ಪ್ರಾಯೋಜಕ ಶಿವರಾಮ ಅಮೀನ್ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮುಲ್ಕಿ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಸ್ಯಾನಿಟೈಸರ್ ಸ್ಟ್ಯಾಂಡ್ ಹಸ್ತಾಂತರಿಸಲಾಯಿತು ಹಾಗೂ ಇಂಟರಾಕ್ಟ್ ಶಿಕ್ಷಕರ ಆನ್ಲೈನ್ ಪ್ರತಿಭಾ ಸ್ಪರ್ಧೆಯ ಬಹುಮಾನ ವಿತರಿಸಲಾಯಿತು.

Edited By : Manjunath H D
Kshetra Samachara

Kshetra Samachara

18/10/2020 09:48 am

Cinque Terre

7.64 K

Cinque Terre

0

ಸಂಬಂಧಿತ ಸುದ್ದಿ