ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಗವದ್ಗೀತೆ ಶ್ಲೋಕ ಪಠಣ ಸ್ಪರ್ಧೆ : ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಸಮನ್ವಿ, ಸರ್ವಣಿಗೆ ಬಹುಮಾನ

ಮೂಡುಬಿದಿರೆ: ಇಸ್ಕಾನ್ ಬೆಂಗಳೂರು ಆಯೋಜಿಸಿದ ಭಗವದ್ಗೀತೆ ಶ್ಲೋಕ ಪಠಣ ಅಂತಾರಾಷ್ಟ್ರೀಯ ಮಟ್ಟದ ಅನ್‍ಲೈನ್ ಸ್ಪರ್ಧೆಯಲ್ಲಿ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಐದನೇ ತರಗತಿ ವಿದ್ಯಾರ್ಥಿನಿ ಸಮನ್ವಿ ಎಸ್. ತೃತೀಯ ಸ್ಥಾನ ಪಡೆದಿದ್ದಾರೆ. ಭಗವದ್ಗೀತೆ ಶ್ಲೋಕ ಪಠಣ ರಾಜ್ಯಮಟ್ಟದ ಮಟ್ಟದ ಸ್ಪರ್ಧೆಯಲ್ಲಿ ರೋಟರಿ ಶಾಲೆಯ 2ನೇ ತರಗತಿ ವಿದ್ಯಾರ್ಥಿನಿ ಸರ್ವಣಿ ಎಸ್. ದ್ವಿತೀಯ ಸ್ಥಾನ ಪಡೆದಿದ್ದಾರೆ.

ಇವರಿಬ್ಬರು ರೋಟರಿ ವಿದ್ಯಾಸಂಸ್ಥೆಯ ಸಿಬ್ಬಂದಿ ಸತೀಶ್ ಹಾಗೂ ರೋಟರಿ ಸಿಬಿಎಸ್‍ಸಿ ವಿಭಾಗದ ಶಿಕ್ಷಕಿ ಮಮತಾ ದಂಪತಿಯ ಪುತ್ರಿಯರು.

Edited By :
Kshetra Samachara

Kshetra Samachara

16/10/2020 10:30 am

Cinque Terre

13.97 K

Cinque Terre

8