ಮಂಗಳೂರು: ಈ ಬಾರಿಯ ದಸರಾ ಉತ್ಸವದಲ್ಲಿ ಸರಳ ರೀತಿಯಲ್ಲಿ ದೇವರ ಸೇವೆಗೆ ಹುಲಿ ವೇಷ ತಂಡಗಳು ನಿರ್ಧರಿಸಿದೆ.
ಹೀಗಾಗಿ ಸಾಂಕೇತಿಕವಾಗಿ ಹುಲಿ ವೇಷ ಕುಣಿತಕ್ಕೆ ಅವಕಾಶ ನೀಡಬೇಕು ಎಂದು ಮಂಗಳೂರಿನ ಶ್ರೀ ಮಂಗಳಾದೇವಿ ದಸರಾ ಶೋಭಾಯಾತ್ರೆ ಸಮಿತಿ ಒತ್ತಾಯಿಸಿದೆ.
ಮಂಗಳೂರಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷ ದಿಲ್‌ರಾಜ್ ಆಳ್ವ, ದಕ್ಷಿಣ ಕನ್ನಡ ಜಿಲ್ಲಾಡಳಿತ ಕೋವಿಡ್ ಹಿನ್ನೆಲೆಯಲ್ಲಿ ಹುಲಿವೇಷ ಕುಣಿತಕ್ಕೆ ನಿಷೇಧ ಹೇರಿದೆ. ಶ್ರೀ ಮಂಗಳಾದೇವಿ ದೇವಸ್ಥಾನ ಹಾಗೂ ಶ್ರೀ ಮಾರಿಯಮ್ಮ ದೇವಸ್ಥಾನದ ಶೋಭಾಯಾತ್ರೆ ಸಮಿತಿಯು ಈಗಾಗಲೇ ರಥೋತ್ಸವದಂದು ಭಾಗವಹಿಸುವ ಹುಲಿವೇಷ ತಂಡಗಳ ಪ್ರಮುಖರ ಸಭೆ ಕರೆದು ಸಾಂಕೇತಿಕವಾಗಿ ಸರಳ ರೀತಿ ಆಚರಣೆ ಅವಕಾಶಕ್ಕೆ ಆಗ್ರಹಿಸಿವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ದಿನೇಶ್ ಕುಂಪಲ, ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಗಿರೀಶ್ ಶೆಟ್ಟಿ, ಉಪಾಧ್ಯಕ್ಷ ಹನೀಷ್ ಎನ್. ಬೋಳಾರ್ ಮೊದಲಾದವರು ಉಪಸ್ಥಿತರಿದ್ದರು.
Kshetra Samachara
11/10/2020 03:30 pm