ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕರಾವಳಿಯಲ್ಲಿ ಸ್ವಯಂ ಬಂಟ ದೈವಗಳೇ ಮನೆ ಹಿರಿಯಾತ್ಮಕ್ಕೆ ಪಿತೃ ಸ್ಥಾನ ಪ್ರದಾನಿಸುವ "ಕಾಲೆ ಕೋಲ!"

ಕರಾವಳಿ ಜನರು ದೇವರ ಹರಕೆ ಬಾಕಿ ಇಟ್ರೂ ಪಿತೃ ಆರಾಧನೆಯಲ್ಲಿ ಅಪಚಾರ ಮಾಡಲ್ಲ, ಕುಟುಂಬದ ಹಿರಿಯರು ಸತ್ತಾಗ ಅವರ ಆತ್ಮ ಸುಲಭದಲ್ಲಿ ಮನೆ ಬಿಟ್ಟು ಹೋಗಲು ಒಪ್ಪಲ್ಲ.

ಆಗ ಸ್ವತ: ಬಂಟ ದೈವಗಳೇ ಬಂದು ಆ ಆತ್ಮಗಳಿಗೆ ಪಿತೃ ಸ್ಥಾನ ಕೊಡಿಸುವ ಆಚರಣೆ ಕರಾವಳಿಯಲ್ಲಿದೆ. ಅದುವೇ ಕಾಲೆಕೋಲ!

ದೇಹದಿಂದ ಆತ್ಮ ದೂರವಾದರೂ ಮನೆ, ಕುಟುಂಬದ ಮೇಲಿನ ಮೋಹ ಹೋಗೋದಿಲ್ವಂತೆ.

ಈ ಕಪ್ಪು ಮೈ ಬಣ್ಣದ ವೇಷಧಾರಿ ಆ ಮೋಹದ ಸಂಕೇತ. ಅಪರ ಕ್ರಿಯೆ ದಿನ ಮೋಹಕ್ಕೊಳಗಾದ ಪ್ರೇತಾತ್ಮವನ್ನು ಮನೆ ಪಕ್ಕದ ಸಮಾಧಿಗೆ ಕೊಂಡೊಯ್ಯಲು ಬಂಟ ದೈವಗಳು ಬರುತ್ತವೆ. ಬಾಳಿ ಬದುಕಿದ ಮನೆ ಬಿಟ್ಟು ಹೋಗಲು ಪ್ರೇತಾತ್ಮ ಅನುಭವಿಸುವ ಸಂಕಟ, ವೇದನೆ ಇಲ್ಲಿ ನರ್ತನ ರೂಪದಲ್ಲಿ ಸಾಕಾರ. ಮನೆಯ ಪ್ರತಿಯೊಬ್ಬರನ್ನೂ ನೆನೆದು, ಹಾರೈಸಿ ಪ್ರೇತಾತ್ಮ ಮನೆಯಿಂದ ಬೀಳ್ಕೊಡುವ ಗಳಿಗೆ ನಿಜಕ್ಕೂ ಭಾವನಾತ್ಮಕ.

ಉಡುಪಿ ಜಿಲ್ಲೆ ಉಪ್ಪೂರು ಬಳಿ ಉಗ್ಗೇಲುಬೆಟ್ಟಿನಲ್ಲಿ ಮನೆ ಹಿರಿಯಜ್ಜಿ ಸತ್ತಾಗ ಕುಟುಂಬಿಕರು ಈ ಆಚರಣೆ ನಡೆಸಿದರು. ಬಂಟ ದೈವಗಳು ಬಂದು ಆತ್ಮ ಕರೆದೊಯ್ಯುವ ಅಪರೂಪದ ಸನ್ನಿವೇಶ ಇಲ್ಲಿ ಕುಣಿತ ರೂಪದಲ್ಲಿ ಪ್ರಸ್ತುತಗೊಳ್ಳುತ್ತದೆ. ಪಿತೃಗಳು ಸಂತುಷ್ಟರಾಗಿದ್ದರೆ, ಆ ಕುಟುಂಬಕ್ಕೆ ಏಳಿಗೆಯಾಗುತ್ತೆ, ಹಾಗಾಗಿ ಸತ್ತು 13ನೇ ದಿನಕ್ಕೆ ಈ ಆಚರಣೆ ನಡೆಯುತ್ತದೆ.

Edited By :
Kshetra Samachara

Kshetra Samachara

08/10/2020 11:57 am

Cinque Terre

28.03 K

Cinque Terre

0

ಸಂಬಂಧಿತ ಸುದ್ದಿ