ಉಪ್ಪಿನಂಗಡಿ : ಅಂಗಡಿಯೊಂದಕ್ಕೆ ನುಗ್ಗಿದ ಕಳ್ಳರು ನಗದು ಕಳವುಗೈದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.ಉಪ್ಪಿನಂಗಡಿ ರಥಬೀದಿಯ ಪಿ.ಬಿ. ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಲಕ್ಷ್ಮೀ ಹಾರ್ಡ್ ವೇರ್ ಅಂಗಡಿಗೆ ನುಗ್ಗಿದ ಖದೀಮರು ಅಂಗಡಿಯಲ್ಲಿದ್ದ ನಗದು ಕಳವುಗೈದಿದ್ದಾರೆ.
ಇತರ ಮೂರು ಅಂಗಡಿಗಳ ಬೀಗ ಮುರಿದಿದ್ದು, ಕಳ್ಳತನಕ್ಕೆ ಯತ್ನಿಸಿದ್ದಾರೆ ಎನ್ನಲಾಗಿದೆ. ಖದೀಮರ ಪತ್ತೆಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Kshetra Samachara
13/10/2022 12:07 pm