ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಸಿಐಎಸ್ಎಫ್ ಮಹಿಳಾ ಪಿಎಸ್ಐ ಗುಂಡು ಹಾರಿಸಿಕೊಂಡು ಕರ್ತವ್ಯದಲ್ಲಿದ್ದಾಗಲೇ ಆತ್ಮಹತ್ಯೆಗೆ ಯತ್ನ

ಮಂಗಳೂರು: ಸಿಐಎಸ್ಎಫ್ ಮಹಿಳಾ ಪಿಎಸ್ಐ ಒಬ್ಬರು ಬೆಳ್ಳಂಬೆಳಗ್ಗೆ ಎನ್ಎಂಪಿಎ ಮುಖ್ಯದ್ವಾರದ ಬಳಿಯೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಗಂಭೀರವಾಗಿ ಗಾಯಗೊಂಡಿರುವ ಅವರನ್ನು ಎ.ಜೆ.ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಜಸ್ತಾನ ರಾಜ್ಯದ ಭರತ್ ಪುರ ಜಿಲ್ಲೆ ಮೂಲದ ಜ್ಯೋತಿ ಬಾಯಿ ಆತ್ಮಹತ್ಯೆಗೆ ಯತ್ನಿಸಿದವರು.

ಎನ್ಎಂಪಿಎ ಮುಖ್ಯ ದ್ವಾರದ ಬಳಿ ಕರ್ತವ್ಯದಲ್ಲಿದ್ದಾಗಲೇ ಜ್ಯೋತಿ ಬಾಯಿ ಬೆಳ್ಳಂಬೆಳಗ್ಗೆ 6 - 6.15ರ ನಡುವಿನ ವೇಳೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಕ್ಷಣ ಅವರನ್ನು ಎ.ಜೆ.ಆಸ್ಪತ್ರೆಗೆ ದಾಖಲಿಸಲಾಗಿದೆ. ಜ್ಯೋತಿ ಬಾಯಿಯವರ ಪತಿ ಓಂಬೀರ್ ಸಿಂಗ್ ಪಾರ್ಮರ್ ಅವರು ಮಂಗಳೂರಿನ ಎಂಆರ್ ಪಿಎಲ್ ನಲ್ಲಿ ಅಸಿಸ್ಟೆಂಟ್ ಕಮಾಂಡರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರಾಥಮಿಕ ವರದಿಯ ಪ್ರಕಾರ ಅದರಲ್ಲಿ ಕೌಟುಂಬಿಕ ಕಲಹವೇ ಆತ್ಮಹತ್ಯೆಗೆ ಕಾರಣ ಎನ್ನಲಾಗುತ್ತಿದೆ‌.

ಆತ್ಮಹತ್ಯೆಗೆ ಯತ್ನಿಸುವ ಮೊದಲು ಜ್ಯೋತಿ ಬಾಯಿಯವರು ತಮ್ಮ ತಾಯಿಯನ್ನು ಉಲ್ಲೇಖಿಸಿ ಹಿಂದಿ ಭಾಷೆಯಲ್ಲಿ ಡೆತ್ ನೋಟ್ ಕೂಡಾ ಬರೆದಿದ್ದಾರೆ. ' ಈ ಜಗತ್ತಿನಲ್ಲಿ ತನಗೆ ಬದುಕಲು ಸಾಧ್ಯವಿಲ್ಲ. ಅದಕ್ಕಾಗಿ ನನ್ನ ಇಚ್ಛೆಯಿಂದಲೇ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಕಾರಣ ಎಂದು ಬರೆದಿದ್ದಾರೆ. ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂಬುದು ಇನ್ನಷ್ಟೇ ತಿಳಿಯಬೇಕಿದೆ.

Edited By : Nirmala Aralikatti
Kshetra Samachara

Kshetra Samachara

12/10/2022 01:38 pm

Cinque Terre

6.47 K

Cinque Terre

2

ಸಂಬಂಧಿತ ಸುದ್ದಿ