(ಮಂಗಳೂರು) ಬಜಪೆ: ಅ.8 ರಂದು ಮಧ್ಯರಾತ್ರಿ ಸಮಯ ವಾಮಂಜೂರು ಜಂಕ್ಷನ್ ಆಸುಪಾಸಿನಲ್ಲಿ ಶಾರದೋತ್ಸವ ಬಗ್ಗೆ ವಾಮಂಜೂರು ಫ್ರೆಂಡ್ಸ್ ಎಂಬ ಸಂಘಟನೆಯು ಸಾರ್ವಜನಿಕ ಸ್ಥಳದಲ್ಲಿ ಹಾಕಲಾಗಿದ್ದ ಫ್ಲೆಕ್ಸ್ ಗಳನ್ನು ಯಾರೋ ಕಿಡಿಗೇಡಿಗಳು ಹರಿದು ಹಾಕಿ ಧಾರ್ಮಿಕ ಭಾವನೆಗಳಿಗೆ ಅನುಮಾನಗೊಳಿಸುವ ಉದ್ದೇಶದಿಂದ ಕೃತ್ಯವನ್ನು ಎಸಗಿರುವವರ ವಿರುದ್ಧ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಇಂದು ಆರೋಪಿತರಾದ ಸುಮಿತ್ ಹೆಗ್ಡೆ, ಯತೀಶ್ ಪೂಜಾರಿ, ಪ್ರವೀಣ್ ಪೂಜಾರಿ ಎಂಬವರುಗಳನ್ನು ವಶಕ್ಕೆ ಪಡೆದು ಕೊಂಡಿದ್ದು, ಕೃತ್ಯಕ್ಕೆ ಬಳಸಲಾಗಿದ್ದ ಸ್ವಿಪ್ಟ್ ಕಾರನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
Kshetra Samachara
11/10/2022 09:26 pm