ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಮಹಿಳೆಯ ಚಿನ್ನದ ಮಾಂಗಲ್ಯ ಸರ ಕಳವು

ಕಾರ್ಕಳ: ಸರಕಾರಿ ಆಸ್ಪತ್ರೆಯ ಮಹಿಳಾ ಸಿಬ್ಬಂದಿಯೊಬ್ಬರ 56 ಗ್ರಾಂ ನ ಮಾಂಗಲ್ಯ ಸರ ಕಳ್ಳತನವಾದ ಪ್ರಕರಣ ಬೆಳಕಿಗೆ ಬಂದಿದೆ.

ಮಹಿಳಾ ಸಿಬ್ಬಂದಿಯೊಬ್ಬರು ಚಿನ್ನದ ಸರವನ್ನು ಬ್ಯಾಗ್ ನಲ್ಲಿ ಇರಿಸಿ ಡ್ಯೂಟಿಗೆ ಹಾಜರಾಗಿದ್ದು, ಕರ್ತವ್ಯ ಮುಗಿಸಿ ಬ್ಯಾಗ್ ಪರಿಶೀಲಿಸುವ ಸಮಯದಲ್ಲಿ ಮಾಂಗಲ್ಯ ಸರ ಕಳ್ಳತನವಾದ ವಿಚಾರ ತಿಳಿದಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.

ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಇಂತಹ ಪ್ರಕರಣಗಳು ಹಲವು ದಿನಗಳಿಂದ ಬೆಳಕಿಗೆ ಬರುತ್ತಿದೆ ಎಂದು ಸಿಬ್ಬಂದಿಯೊಬ್ಬರು ಆರೋಪಿಸಿದ್ದಾರೆ.

ಕೆಲವು ದಿನಗಳಿಂದ ಆಸ್ಪತ್ರೆಯ ಸಿಸಿ ಟಿವಿ ಹಾಳಾಗಿದ್ದು ತನಿಖೆಗೆ ಹಿನ್ನಡೆಯಾಗಿದೆ. ಪೊಲೀಸರು ಈ ಪ್ರಕರಣವನ್ನು ಪತ್ತೆ ಹಚ್ಚಲು ತನಿಖೆ ಮುಂದುವರಿಸಿದ್ದಾರೆ.

Edited By : Abhishek Kamoji
Kshetra Samachara

Kshetra Samachara

10/10/2022 08:05 pm

Cinque Terre

10.83 K

Cinque Terre

0

ಸಂಬಂಧಿತ ಸುದ್ದಿ