ಕಾಪು: ಕಾಪು ತಾಲೂಕಿನ ಬೆಳಪು ಗ್ರಾಮ ವ್ಯಾಪ್ತಿಯಲ್ಲಿ ಅಕ್ರಮವಾಗಿ ಕಾರ್ಯಾಚರಿಸುತ್ತಿದ್ದ ಕಸಾಯಿಖಾನೆಗೆ ಶಿರ್ವ ಠಾಣಾಧಿಕಾರಿ ರಾಘವೇಂದ್ರ ಅವರ ತಂಡ ದಾಳಿ ನಡೆಸಿ, ಒಂದು ಗಂಡು ಕರುವನ್ನು ರಕ್ಷಿಸಿದೆ. ಈ ಸಂಬಂಧ ಮೂವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.
ಬೆಳಪು ಗ್ರಾಮದ ಬಳಿಯ ದಿ. ಸುಲ್ತಾನ್ ಅಹಮ್ಮದ್ ಅವರ ಮಗ ತಬ್ರೇಸ್ (30), ಮಲ್ಲಾರು ಗ್ರಾಮದ ಅಮಾನುಲ್ಲಾ ಅಸೈನ್ ಅವರ ಮಗ ಮೊಹಮ್ಮದ್ ಅಜೀಮ್ (39), ಬೆಳಪು ಗ್ರಾಮದ ಮಧುರಾ ಸ್ಟೋರ್ ಬಳಿಯ ನಿವಾಸಿ ಮಕ್ಬೂಲ್ ಹುಸೇನ್ ಅವರ ಮಗ ಮೊಹಮ್ಮದ್ ವಲೀದ್ (20) ಪೊಲೀಸರು ವಶಕ್ಕೆ ಪಡೆದ ಆರೋಪಿಗಳು.
ಕಾರ್ಯಚರಣೆಯಲ್ಲಿ 30,000 ರೂ. ಮೌಲ್ಯದ 3 ಬೈಕ್, 10 ಕೆಜಿ ಮಾಂಸ, ಚರ್ಮ, ಎರಡು ಕತ್ತಿಗಳು, ಮೂರು ಚಾಕುಗಳು, 1,000 ರೂ. ಮೌಲ್ಯದ ತೂಕದ ಇಲೆಕ್ಟ್ರಾನಿಕ್ ಯಂತ್ರ ಮತ್ತು 5 ಹಗ್ಗಗಳನ್ನು ವಶಕ್ಕೆ ಪಡೆಯಲಾಗಿದೆ.
Kshetra Samachara
10/10/2022 01:50 pm