ಬಂಟ್ವಾಳ: ಪಾರ್ಸೆಲ್ ಪಡೆಯಲು ಬಂದಿದ್ದ ಅಪ್ರಾಪ್ತ ವಯಸ್ಕ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಬೆದರಿಸಿದ್ದಾಗಿ ಕಲ್ಲಡ್ಕದ ಕೋಳಿ ಟಿಕ್ಕಾ ಮಾರಾಟದ ಅಂಗಡಿಯೊಂದರ ಮಾಲೀಕ ಮಹಮ್ಮದ್ ಅಶ್ರಫ್ ಎಂಬ ವ್ಯಕ್ತಿ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾಲಕ ಟಿಕ್ಕಾ ಪಾರ್ಸೆಲ್ ಕೇಳಿದಾಗ, ಕೊಂಡುಹೋಗಲು ಪ್ಲಾಸ್ಟಿಕ್ ಚೀಲವನ್ನು ತರುವಂತೆ ಅಂಗಡಿಯ ಒಳಗೆ ಬರುವಂತೆ ಹೇಳಿದ ಆರೋಪಿ ಬಾಲಕನ ಹಿಂಬದಿಯಿಂದ ಹೋಗಿ ಆತನನ್ನು ಹಿಡಿದು ಎತ್ತಿಕೊಂಡು ಅಲ್ಲೇ ಸಮೀಪದ ತೋಟಕ್ಕೆ ಕರೆದುಕೊಂಡು ಹೋಗಿ ಅಲ್ಲಿ ದೌರ್ಜನ್ಯ ಎಸಗಿದ್ದು, ಘಟನೆ ನಡೆದು ಎರಡು ತಿಂಗಳ ಬಳಿಕ ಮತ್ತೆ ದೌರ್ಜನ್ಯ ಎಸಗಲು ಪ್ರಯತ್ನಿಸಿದ ಆರೋಪ ಈತನ ಮೇಲಿದೆ. ಈ ಸಂದರ್ಭ ಬಾಲಕ ವಿರೋಧ ವ್ಯಕ್ತಪಡಿಸಿದಾಗ, ಹಲ್ಲೆ ನಡೆಸಿದ್ದಾಗಿ ಆರೋಪಿಸಲಾಗಿದ್ದು, ಬಂಟ್ವಾಳ ನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
PublicNext
05/10/2022 08:58 pm