ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು: ಖಂಬದಕೋಣೆ ಸೊಸೈಟಿ ಗೋಲ್ಮಾಲ್ ಆರೋಪಕ್ಕೆ ಇಲ್ಲಿವೆ ದಾಖಲೆಗಳು: ವಂಚಿಸಿದವರನ್ನು ಬಿಟ್ಟು ವಂಚಿತರ ವಿರುದ್ಧ ಕ್ರಮಕ್ಕೆ ಆಗ್ರಹವೇಕೆ?

ಬೈಂದೂರು : ಸೆ. 30ರಂದು “ಪಬ್ಲಿಕ್ ನೆಕ್ಸ್ಟ್”ನಲ್ಲಿ ಪ್ರಸಾರವಾದ ಖಂಬದಕೋಣೆ ಸೊಸೈಟಿಯಲ್ಲಿ ಅಜ್ಜಿಯ ಹೆಸರಲ್ಲಿ 25 ಲಕ್ಷ ಪಂಗನಾಮ ಕುರಿತ ವರದಿಗೆ ಸಂಬಂಧಪಟ್ಟಂತೆ ಅಧಿಕಾರಿಗಳು ಈವರೆಗೆ ಸ್ಪಂದಿಸಿಲ್ಲ. ಬದಲಾಗಿ ಪಬ್ಲಿಕ್ ನೆಕ್ಸ್ಟ್ ಸುಳ್ಳು ವರದಿ ನೀಡಿದೆ ಎನ್ನುವ ರೀತಿಯಲ್ಲಿ ಬಿಂಬಿಸಲಾಗುತ್ತಿದ್ದು, “ಪಬ್ಲಿಕ್ ನೆಕ್ಸ್ಟ್” ದಾಖಲೆಗಳಿಲ್ಲದೇ ಯಾವುದೇ ವರದಿಗಳನ್ನು ಬಿತ್ತರಿಸುವುದಿಲ್ಲ ಎನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸುತ್ತಿದೆ.

ಪುಟ್ಟಿ ಪೂಜಾರ್ತಿ ಹೆಸರಿನ ಜಿಪಿಎ ಬಳಸಿ ಸೊಸೈಟಿಯ ನಿರ್ದೇಶಕ ಮೋಹನ ಪೂಜಾರಿ ಹಾಗೂ ಆತನ ಸ್ನೇಹಿತ ದಿನೇಶ್ ಮೊಗವೀರ ಎಂಬುವರು ಅಜ್ಜಿಯ ಮೊಮ್ಮಗ ನಾಗರಾಜನನ್ನು ಪುಸಲಾಯಿಸಿ ಆತನ ಹೆಸರಿನಲ್ಲಿ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದಿಂದ 25 ಲಕ್ಷ ಸಾಲ ಪಡೆದು ದುರುಪಯೋಗಪಡಿಸಿಕೊಂಡಿರುವುದು ಜಗಜ್ಜಾಹೀರಾಗಿದೆ. ಆದರೂ ಆರೋಪಿಗಳಾದ ಮೋಹನ ಪೂಜಾರಿಯ ವಿರುದ್ಧವಾಗಲೀ ಆತನ ಸ್ನೇಹಿತ ದಿನೇಶ್ ಮೊಗವೀರನ ವಿರುದ್ಧವಾಗಲೀ ಕ್ರಮ ಕೈಗೊಳ್ಳುವುದನ್ನು ಬಿಟ್ಟು “ಪಬ್ಲಿಕ್ ನೆಕ್ಸ್ಟ್” ಮೊರೆ ಬಂದಿರುವ ದಿಕ್ಕು ಕಾಣದ ಪುಟ್ಟಿ ಪೂಜಾರ್ತಿ ಹಾಗೂ ಮೋಸ ಹೋದ ನಾಗರಾಜನ ವಿರುದ್ಧ ಕ್ರಮ ಕೈಗೊಳ್ಳಲು ಸೊಸೈಟಿ ಅಧಿಕಾರಿಗಳು ಆಗ್ರಹಿಸುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಈ ಬಗ್ಗೆ ಮೊದಲ ಸುತ್ತಿನ ದಾಖಲೆಯನ್ನು ಬಿಡುಗಡೆಗೊಳಿಸಿದೆ.

Edited By : Shivu K
PublicNext

PublicNext

04/10/2022 12:29 pm

Cinque Terre

28.22 K

Cinque Terre

3

ಸಂಬಂಧಿತ ಸುದ್ದಿ