ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೊಳ್ಳೂರು: ನದಿ ದಂಡೆಗೆ ಆಕ್ರಮ ವಿದ್ಯುತ್ ಸಂಪರ್ಕ; ಮೆಸ್ಕಾಂ ಜಾಗೃತ ದಳ ದಾಳಿ

ಮುಲ್ಕಿ: ಹಳೆಯಂಗಡಿ ಸಮೀಪದ ಕೊಯಿಕುಡೆ ಬೊಳ್ಳೂರು ಬಳಿ ಶಾಂಭವಿ ನದಿ ದಂಡೆಗೆ ವಿದ್ಯುತ್ ಬಲ್ಬುಗಳನ್ನು ಅಳವಡಿಸಿ ಮನೆಯಿಂದ ಅಕ್ರಮ ವಿದ್ಯುತ್ ಸಂಪರ್ಕ ನೀಡಿದ ಬಗ್ಗೆ ಸಾರ್ವಜನಿಕರ ದೂರಿನ ಅನ್ವಯ ದಾಳಿ ನಡೆಸಿದ ಮಂಗಳೂರಿನ ಮೆಸ್ಕಾಂ ಜಾಗೃತ ದಳ ಮನೆಯ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಮನೆಯ ಮಾಲೀಕ ವಿನ್ಸೆಂಟ್ ಮಿರಾಂಡ ಎಂಬಾತ ನದಿ ದಂಡೆಯಲ್ಲಿ ಅಕ್ರಮವಾಗಿ ಮೂರು ವಿದ್ಯುತ್ ಬಲ್ಬುಗಳನ್ನು ಅಳವಡಿಸಿ ತಮ್ಮ ಮನೆಯಿಂದ ವಿದ್ಯುತ್ ಸಂಪರ್ಕ ನೀಡಿದ್ದಾರೆ. ಈ ಬಗ್ಗೆ ಸ್ಥಳೀಯರಿಂದ ದೂರು ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ದಾಳಿ ನಡೆಸಿ ಪರಿಶೀಲನೆ ನಡೆಸಿದಾಗ ಅಕ್ರಮ ಬಯಲಿಗೆ ಬಂದಿದ್ದು ಮುಲ್ಕಿ ಮೆಸ್ಕಾಂ ಉಪ ವಿಭಾಗಕ್ಕೆ ದಂಡ ವಿಧಿಸಲು ವರದಿ ನೀಡಿದ್ದಾರೆ.

ಹಳೆಯಂಗಡಿ ಸಮೀಪದ ಪಕ್ಷಿಕೆರೆ ಬಳಿಯ ಕೊಯಿಕುಡೆ ಬೊಳ್ಳೂರು ಶಾಂಭವಿ ನದಿ ತಟದಲ್ಲಿ ಎಗ್ಗಿಲ್ಲದೆ ರಾತ್ರೋರಾತ್ರಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದು ಇದಕ್ಕಾಗಿ ವಿದ್ಯುತ್ ಬಲ್ಬುಗಳನ್ನು ಅಳವಡಿಸಿರುವ ಬಗ್ಗೆ ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದು ಗಣಿ ಹಾಗೂ ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

30/09/2022 08:11 pm

Cinque Terre

23.25 K

Cinque Terre

1