ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಬ್ರಹ್ಮಣ್ಯ: 14 ವರ್ಷದ ಬಾಲಕಿಯ ಅತ್ಯಾಚಾರ: ಮಹಿಳೆ ಸೇರಿ 14 ಮಂದಿ ವಿರುದ್ಧ ಪ್ರಕರಣ ದಾಖಲು

ಸುಬ್ರಹ್ಮಣ್ಯ : 14 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ದೂರಿನ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಮಹಿಳೆ ಸೇರಿ 14 ಮಂದಿಯ ವಿರುದ್ಧ ದೂರು ದಾಖಲಾಗಿದೆ.

ಸುಬ್ರಹ್ಮಣ್ಯದ 14 ವರ್ಷದ ಬಾಲಕಿಯ ಮೇಲೆ 2015ರ ಜನವರಿಯಿಂದ 2022ರ ಮೇ ವರೆಗೆ ಬೇರೆ ಬೇರೆ ಆರೋಪಿಗಳು ಬೇರೆ ಬೇರೆ ಸ್ಥಳದಲ್ಲಿ ಅತ್ಯಾಚಾರ ನಡೆಸಿದ ಬಗ್ಗೆ ದೂರಿನಲ್ಲಿ ತಿಳಿಸಲಾಗಿದೆ. ವೇದಾವತಿ, ವಿನೋದ್ ಮಣಿಯಾಣಿ, ಪ್ರವೀಣ್, ದಯಾನಂದ, ಹನುಮಂತ, ಆನಂದ, ಪ್ರದೀಪ್, ಅಚ್ಯುತಾ, ಸತೀಶ್ ಗೌಡ, ಜಯಪ್ರಕಾಶ್, ಜಯಪ್ರಕಾಶ್ ತಮ್ಮ, ಮಾಂಕು, ಗುತ್ತಿಗಾರಿನ ವ್ಯಕ್ತಿ, ವೇದಾವತಿ ಎಂಬವರ ಪ್ರಿಯತಮ ಎಂಬವರ ಮೇಲೆ ದೂರು ದಾಖಲಾಗಿದೆ. ಬಾಲಕಿ 5ನೇ ತರಗತಿಯಲ್ಲಿ ಇರುವ ಸಂದರ್ಭದಲ್ಲಿ ಆಕೆಯ ಅತ್ತಿಗೆ ವೇದಾವತಿ ಲೈಂಗಿಕ ದೌರ್ಜನ್ಯ ಎಸಗಿದ್ದು, ಬಳಿಕ ವಿವಿಧ ಆರೋಪಿಗಳು ಬೇರೆ ಬೇರೆ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಬೆದರಿಕೆ ಒಡ್ಡಿರುವ ಬಗ್ಗೆಯೂ ದೂರಿನಲ್ಲಿ ತಿಳಿಸಲಾಗಿದೆ. ಆರೋಪಿಗಳ ವಿರುದ್ಧ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದಲ್ಲಿ ಕಾನೂನು ಕ್ರಮಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಲಾಗಿದೆ. ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nagaraj Tulugeri
PublicNext

PublicNext

29/09/2022 10:57 pm

Cinque Terre

28.58 K

Cinque Terre

14

ಸಂಬಂಧಿತ ಸುದ್ದಿ