ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಳ್ಯ: ಮಾರಕಾಸ್ತ್ರದೊಂದಿಗೆ ಗ್ರಾಮ ಲೆಕ್ಕಾಧಿಕಾರಿ ಕಚೇರಿಗೆ ನುಗ್ಗಿ ದಾಂಧಲೆ– ಕೊಲೆಗೆ ಯತ್ನ

ಸುಳ್ಯ: ಜಾಗದ ಗಲಾಟೆಯಿಂದ ಬೇಸತ್ತ ವ್ಯಕ್ತಿಯೋರ್ವ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸವಣೂರು ಕಂದಾಯ ಕಚೇರಿಗೆ ನುಗ್ಗಿ ದಾಂಧಲೆ ನಡೆಸಿದ ಘಟನೆ ಇಂದು ನಡೆದಿದೆ.

ಸವಣೂರು ಗ್ರಾಮದ ಇಡ್ಯಾಡಿ ನಿವಾಸಿ ಪ್ರಸಾದ್ ಎಂಬಾತ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದು ಬಂದಿದೆ. ಕೃತ್ಯ ಎಸಗಿದ ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ.

ಈತ ಸೆ 28ರಂದು ಬುಧವಾರ ಸವಣೂರು ಜಂಕ್ಷನ್‌ನಲ್ಲಿರುವ ಗ್ರಾಮ ಲೆಕ್ಕಾಧಿಕಾರಿ ಕಛೇರಿಗೆ ಭೇಟಿ ನೀಡಿದ್ದಾನೆ. ಈ ವೇಳೆ ಗ್ರಾಮ ಲೆಕ್ಕಾಧಿಕಾರಿಗೆ ತಲ್ವಾರು ಝಳಪಿಸಿದ್ದಾನೆ. ಬಳಿಕ ಹಲ್ಲೆಗೆ ಮುಂದಾಗಿದ್ದಾನೆ ಹಾಗು ಕಲ್ಲು ಎತ್ತು ಹಾಕಿ ಕೊಲೆಗೆ ಯತ್ನಿಸಿದ್ದಾನೆ ಎಂದು ಹೇಳಲಾಗಿದೆ. ಬಳಿಕ ಆತ ಸವಣೂರು ಗ್ರಾ.ಪಂ. ಕಟ್ಟಡದಲ್ಲಿರುವ ಗುಣಪಾಲ ಗೌಡ ಇಡ್ಯಾಡಿ ಎಂಬವರಿಗೆ ಸೇರಿದ ಬೇಕರಿಯನ್ನೂ ಕೂಡಾ ತಲವಾರಿನಿಂದ ಪುಡಿಗೈದಿದ್ದಾನೆ. ಬಳಿಕ ಆತ ಅಂಗಡಿ ಮಾಲಕರ ಕೊಲೆಗೂ ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಜಾಗದ ವಿಚಾರವಾಗಿ ತಕರಾರು ಇದ್ದು ಈ ಹಿನ್ನಲೆಯಲ್ಲಿ ಆರೋಪಿಯು ಗ್ರಾಮ ಲೆಕ್ಕಾಧಿಕಾರಿಯ ವಿರುದ್ಧ ಆಕ್ರೋಶಗೊಂಡಿದ್ದ ಎನ್ನಲಾಗಿದೆ.ಸ್ಥಳಕ್ಕೆ ಬೆಳ್ಳಾರೆ ಠಾಣೆಯ ಎಸೈ ಸುಹಾಸ್ ಹಾಗೂ ಸಿಬ್ಬಂದಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಆರೋಪಿಯ ಪತ್ತೆಗಾಗಿ ಶೋಧ ಕಾರ್ಯಚರಣೆ ನಡೆಸುತ್ತಿದ್ದಾರೆ.

Edited By : Manjunath H D
Kshetra Samachara

Kshetra Samachara

28/09/2022 08:56 pm

Cinque Terre

9.88 K

Cinque Terre

0

ಸಂಬಂಧಿತ ಸುದ್ದಿ