ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿಲ್ಪಾಡಿ: ವ್ಯಕ್ತಿ ನಿಗೂಢ ಸಾವು; ಆಸಿಫ್ ಆಪದ್ಬಾಂಧವ ಮೂಲಕ ಶವ ತೆರವು

ಮುಲ್ಕಿ: ಇಲ್ಲಿಗೆ ಸಮೀಪದ ಕಿಲ್ಪಾಡಿ ಮದಕ ಬಳಿಯ ಮನೆಯೊಂದರಲ್ಲಿ ವ್ಯಕ್ತಿ ನಿಗೂಢ ಸಾವನ್ನಪ್ಪಿದ್ದು ನಾಲ್ಕು ದಿನಗಳ ಬಳಿಕ ಪೊಲೀಸರಿಗೆ ಮಾಹಿತಿ ತಿಳಿದು ಮೃತ ದೇಹವನ್ನು ತೆರವುಗೊಳಿಸಲಾಗಿದೆ. ಮೃತ ವ್ಯಕ್ತಿಯನ್ನು ಸ್ಥಳಿಯ ನಿವಾಸಿ ಸುಧೀರ್ ಶೆಟ್ಟಿ (45) ಎಂದು ಗುರುತಿಸಲಾಗಿದೆ

ಮೃತ ಸುಧೀರ್ ಶೆಟ್ಟಿ ಎಸ್ ಇ ಝೆಡ್ ನಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದು ಪತ್ನಿಯೊಂದಿಗೆ ಮನೆಯಲ್ಲಿ ವಾಸಿಸುತ್ತಿದ್ದರು.

ಮೃತ ಸುಧೀರ್ ಶೆಟ್ಟಿ ಮದ್ಯ ವ್ಯಸನಿಯಾಗಿದ್ದು ಕೆಲ ಸಮಯದ ಹಿಂದೆ ಪತ್ನಿ ಜೊತೆ ಕ್ಷುಲ್ಲಕ ಕಾರಣಕ್ಕಾಗಿ ಜಗಳವಾಡಿದ್ದು ಪತ್ನಿ ತವರು ಮನೆಗೆ ಹೋಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ

ಆದರೆ ಕಳೆದ ನಾಲ್ಕು ದಿನಗಳ ಹಿಂದೆ ಸುಧೀರ್ ಶೆಟ್ಟಿಯವರು ನಾಪತ್ತೆಯಾಗದಿರುವುದನ್ನು ಗಮನಿಸಿ ಸಂಬಂಧಿಕರು ಫೋನ್ ಮೂಲಕ ಸಂಪರ್ಕಿಸಲು ಯತ್ನಿಸಿ ವಿಫಲಗೊಂಡು ಮನೆಗೆ ಬಂದು ಮಂಗಳವಾರ ಸಂಜೆ ವೇಳೆ ಪರಿಶೀಲಿಸಿದಾಗ ಕೊಳೆತ ಸ್ಥಿತಿಯಲ್ಲಿ ಸುಧೀರ್ ಶೆಟ್ಟಿ ಶವ ಪತ್ತೆಯಾಗಿದೆ

ಮಂಗಳವಾರ ರಾತ್ರಿ ಸುಮಾರು 1,30 ಗಂಟೆಗೆ ಕೊಳೆತು ನಾರುತ್ತಿದ್ದ ಮೃತ ಶರೀರವನ್ನು ಆಸಿಫ್ ಆಪತ್ಬಾಂಧವರ ಆಂಬುಲೆನ್ಸ್ ಮೂಲಕ ಮುಲ್ಕಿ ಸರಕಾರಿ ಆಸ್ಪತ್ರೆಯ ಶವಗಾರದಲ್ಲಿಡಲಾಗಿದ್ದು ನಿಗೂಢ ಸಾವಿನ ಬಗ್ಗೆ ಕಾರಣ ಇನ್ನಷ್ಟೇ ತಿಳಿಯಬೇಕಾಗಿದೆ.

Edited By : Shivu K
Kshetra Samachara

Kshetra Samachara

28/09/2022 07:09 pm

Cinque Terre

20.58 K

Cinque Terre

0

ಸಂಬಂಧಿತ ಸುದ್ದಿ