ಮಣಿಪಾಲ: ಮಣಿಪಾಲ ಪೊಲೀಸರು ಮಾದಕ ವಸ್ತು ಸೇವನೆ ಪ್ರಕರಣಕ್ಕೆ ಸಂಬಂಧಿಸಿ 3 ಮಂದಿಯನ್ನು ವಶಕ್ಕೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಚೆರಿಯನ್ ಆಬ್ರಾಹಂ (21), ಜೊಯಲ್ ಜಾನ್ಸನ್ (21), ಮ್ಯಾಥ್ಯೂ ಕ ಬೇಬಿ (21) ಪೊಲೀಸರು ವಶಕ್ಕೆ ಪಡೆದ ಯುವಕರು. ಮಣಿಪಾಲ ಪೊಲೀಸರು ಇಲ್ಲಿಗೆ ಸಮೀಪದ ಶೀಂಬ್ರಾ ಸೇತುವೆ ಬಳಿ ಕರ್ತವ್ಯದಲ್ಲಿದ್ದ ವೇಳೆ ಇಲ್ಲಿನ ಸಾರ್ವಜನಿಕ ಸ್ಥಳದಲ್ಲಿ ಅಮಲಿನಲ್ಲಿದ್ದಂತೆ ಕಂಡು ಬಂದ ಚೆರಿಯನ್ ಅಬ್ರಾಹಂ, ಜೊಯಲ್ ಜಾನ್ಸನ್ ಮತ್ತು ಮ್ಯಾಥ್ಯೂ ಬೇಬಿ ಎಂಬ ಮೂವರನ್ನು ಮಾದಕ ವಸ್ತು ಸೇವಿಸಿರುವ ಅನುಮಾನದ ಮೇರೆಗೆ ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದರು. ವೈದ್ಯಕೀಯ ಪರೀಕ್ಷೆ ವರದಿಯಲ್ಲಿ ಈ ಮೂವರು ಗಾಂಜಾ ಸೇವಿಸಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಮೂವರ ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
PublicNext
28/09/2022 02:34 pm