ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಿರ್ಗಾನ ಬಳಿ ಖಾಸಗಿ ಬಸ್ ಬೊಲೆರೋ ಡಿಕ್ಕಿ : ಇಬ್ಬರು ಪ್ರಯಾಣಿಕರಿಗೆ ಗಾಯ

ಕಾರ್ಕಳ : ಹಿರ್ಗಾನ ಬಳಿ ಬಸ್ ಬೊಲೆರೊ ಮುಖಾಮುಖಿ ಢಿಕ್ಕಿ ಯಾದ ಘಟನೆ ಶನಿವಾರ ಸಂಜೆ ಹಿರ್ಗಾನದ ದುಗ್ಗಣರಾಯ ಚಡಾವು ಎಂಬಲ್ಲಿ ನಡೆದಿದೆ.ಅಪಘಾತದ ಪರಿಣಾಮವಾಗಿ ಬಸ್ ನಲ್ಲಿದ್ದ ಪ್ರಯಾಣಿಕರಿಗೆ ಗಾಯಗಳಾಗಿದ್ದು ಅಪಾಯದಿಂದ ಪಾರಾಗಿದ್ದಾರೆ. ಬಸ್ ನ ಮುಂಭಾಗ ಹಾಗೂ ಬೊಲೆರೋ ಮುಂಭಾಗವು ಸಂಪೂರ್ಣ ನಜ್ಜುಗುಜ್ಜಾಗಿದೆ.

ಬಸ್ ಕಾರ್ಕಳ ದಿಂದ ಹೆಬ್ರಿಯ ಕಡೆಗೆ ಸಾಗುತಿತ್ತು.ಅಪಘಾತದ ಸ್ಥಳದಲ್ಲಿ ರಸ್ತೆಯ ಮೋರಿ ಕುಸಿತ ಗೊಂಡಿದ್ದು ಪಬ್ಲಿಕ್ ನೆಕ್ಸ್ಟ್ ವಾಹಿನಿಯು ಸುದ್ದಿ ಮಾಡಿದ ಬೆನ್ನಲ್ಲೇ ದುರಸ್ತಿಗೊಳಿಸಲಾಗಿತ್ತು. ಕಾಮಗಾರಿ ನಡೆದ ಬಳಿಕ ಕಾಂಕ್ರೀಟ್ ಸ್ಲಾಬ್ ಗಟ್ಟಿಯಾಗಲು ಎರಡೂ ಕಡೆ ಸಂಚಾರ ನಿರ್ಬಂಧಿಸಿ ಬ್ಯಾರಿಕೇಡ್ ಅಳವಡಿಸಿ ಏಕಮುಖ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ಆದರೆ ಇದೇ ಸ್ಥಳದಲ್ಲಿ ಅಪಘಾತ ಸಂಭವಿಸಿದೆ. ಅಲ್ಲದೇ ಇದೇ ಸ್ಥಳದಿಂದ ಅನತಿದೂರದ ತಿರುವಿನಲ್ಲಿ 10 ದಿನಗಳ ಹಿಂದೆ ಬಸ್ ಹಾಗೂ ಪಿಕಪ್ ಅಪಘಾತದಲ್ಲಿ ಪಿಕಪ್ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.

ಆದ್ದರಿಂದ ಈ ಪ್ರದೇಶದಲ್ಲಿ ರಸ್ತೆ ಅಗಲೀಕರಣ ನಡೆಸಿ ಅಪಘಾತ ತಪ್ಪಿಸಬೇಕಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

24/09/2022 08:47 pm

Cinque Terre

9.61 K

Cinque Terre

0