ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು: ಹಿಂ.ಜಾ.ವೇಯ ದುರ್ಗಾ ದೌಡ್ ಬ್ಯಾನರ್ ಹರಿದ ಕಿಡಿಗೇಡಿಗಳು!

ಅಕ್ಟೋಬರ್ 2 ರಂದು ಉಡುಪಿಯಲ್ಲಿ ಹಿಂದೂ ಜಾಗರಣ ವೇದಿಕೆ ವತಿಯಿಂದ ನಡೆಯಲಿರುವ ದುರ್ಗಾ ದೌಡ್ ಕಾರ್ಯಕ್ರಮಕ್ಕೆ ಶುಭಕೋರಿ ಗಂಗೊಳ್ಳಿ ಠಾಣಾ ವ್ಯಾಪ್ತಿಯ ಗಂಗೊಳ್ಳಿ- ಮೇಲ್ ಗಂಗೊಳ್ಳಿ ದಾಕುಹಿತ್ಲು ಹೋಗುವ ಮಾರ್ಗ ದಲ್ಲಿ ಅಳವಡಿಸಲಾದ ಬ್ಯಾನರ್ ನ್ನು ಕಿಡಿಗೇಡಿಗಳು ಹರಿದು ಹಾಕಿರುವ ಘಟನೆ ಇಂದು ಬೆಳಿಗ್ಗೆ ನಡೆದಿದೆ.

ಬ್ಯಾನರ್ ಅಳವಡಿಸಿದ್ದ ಸ್ಥಳದ ಹಿಂಬದಿಯಲ್ಲಿ ಎಸ್.ಡಿ.ಪಿ.ಐ ಕಚೇರಿ ಇದೆ. ಅದರ ಗೋಡೆಯ ಮೇಲೆ ಎಸ್.ಡಿ.ಪಿ.ಐ ಎಂಬ ಬರಹವಿದೆ. ಆ ಬರಹ ಕಾಣುವ ರೀತಿಯಲ್ಲಿ ಬ್ಯಾನರ್ ಅನ್ನು ಹರಿದು ಹಾಕಲಾಗಿದೆ ಎಂದು ಹಿಂ.ಜಾ.ವೇ ಕಾರ್ಯಕರ್ತರು ಆರೋಪಿಸಿದ್ದಾರೆ.

ಸ್ಥಳಕ್ಕೆ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಭೇಟಿ ನೀಡಿ ಹೊಸ ಬ್ಯಾನರ್ ನ್ನು ಅಳವಡಿಸಿದ್ದಾರೆ. ಗಂಗೊಳ್ಳಿ ಠಾಣೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Edited By :
PublicNext

PublicNext

22/09/2022 03:00 pm

Cinque Terre

29.17 K

Cinque Terre

0

ಸಂಬಂಧಿತ ಸುದ್ದಿ