ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪುತ್ತೂರಿನ ಎಸ್.ಡಿ.ಪಿ ಐ ಮುಖಂಡ ಅಬ್ದುಲ್ ಖಾದರ್ ಪೊಲೀಸ್ ವಶಕ್ಕೆ

ಪುತ್ತೂರು: ರಾಷ್ಟ್ರೀಯ ತನಿಖಾ ದಳ ದಾಖಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ಮತ್ತು ಸ್ಥಳೀಯ ಪೊಲೀಸರ ತಂಡ ದಕ್ಷಿಣಕನ್ನಡ ಜಿಲ್ಲೆಯ ಹಲವೆಡೆ ಇಂದು ಮುಂಜಾನೆಯಿಂದಲೇ ದಾಳಿ ನಡೆಸಿ ಹಲವರನ್ನು ವಶಕ್ಕೆ ಪಡೆದುಕೊಂಡಿದೆ. ಪಿ ಎಫ್ ಐ ಮತ್ತು ಎಸ್.ಡಿ.ಪಿ.ಐ ಮುಖಂಡರ ಮನೆಗಳಿಗೆ ಹಾಗೂ ಕಚೇರಿಗಳಿಗೆ ದಾಳಿ ನಡೆಸಿದ ಪೊಲೀಸ್ ತಂಡ ಹಲವು ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದೆ.

ಪುತ್ತೂರಿನ ಸಾಮೆತ್ತಡ್ಕದಲ್ಲಿರುವ ಎಸ್.ಡಿ. ಪಿ.ಐ ರಾಜ್ಯ ಕಾರ್ಯದರ್ಶಿ ಅಬ್ದುಲ್ ಖಾದರ್ ಮತ್ತು ಉಪ್ಪಿನಂಗಡಿಯ ಎಸ್.ಡಿ.ಪಿ.ಐ ಮುಖಂಡ ಆಯುಬ್ ಅಗ್ನಾಡಿ ಮನೆಯನ್ನು ಶೋಧ ಮಾಡಿರುವ ಪೊಲೀಸರು ಹಲವು ದಾಖಲೆಗಳನ್ನು ಸಂಗ್ರಹಿಸಿದ್ದಾರೆ. ಎಸ್‌.ಡಿ.ಪಿ.ಐ ಮುಖಂಡರ ಮೇಲೆ ನಡೆದ ದಾಳಿಯನ್ನು ಖಂಡಿಸಿ ಪಿಎಫ್ ಐ ಮತ್ತು ಎಸ್ ಡಿ ಪಿ ಐ ಸಂಘಟನೆಯ ಕಾರ್ಯಕರ್ತರು ಪುತ್ತೂರಿನ ದರ್ಬೆ ವೃತ್ತದ ಬಳಿ ಪ್ರತಿಭಟನೆಯನ್ನು ನಡೆಸಿದ್ದಾರೆ.

ಸಾಮೆತ್ತಡ್ಕದ ಎಸ್ ಟಿ ಪಿ ಐ ರಾಜ್ಯ ಕಾರ್ಯದರ್ಶಿ ಅಬ್ದುಲ್ ಖಾದರ್ ನನ್ನು ಪೊಲೀಸರು ಇದೇ ಸಂದರ್ಭದಲ್ಲಿ ವರ್ಷಕ್ಕೆ ಪಡೆದು ವಿಚಾರಣೆಗಾಗಿ ಪುತ್ತೂರು ನಗರ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.

Edited By : PublicNext Desk
Kshetra Samachara

Kshetra Samachara

22/09/2022 12:37 pm

Cinque Terre

8.9 K

Cinque Terre

0

ಸಂಬಂಧಿತ ಸುದ್ದಿ