ಉಡುಪಿ : ಉಡುಪಿಯ ಕರಾವಳಿ ಬೈಪಾಸ್‌ನ ಫ್ಲೈ ಓವರ್‌ನಿಂದ ಕೆಳಗೆ ಬಿದ್ದ ಯುವಕನನ್ನು ಸಮಾಜ ಸೇವಕ ವಿಶುಶೆಟ್ಟಿ ರಕ್ಷಿಸಿದ ಘಟನೆ ಬುಧವಾರ ರಾತ್ರಿ ಸಂಭವಿಸಿದೆ. ರಾತ್ರಿ 9 ಗಂಟೆ ಸುಮಾರಿಗೆ ಕರಾವಳಿ ಬೈ ಪಾಸ್ ಬಳಿಯ ಫ್ಲೈ ಓವರ್‌ನಿಂದ ಈ ಯುವಕ ಕೆಳಗೆ ಬಿದ್ದು ಮಾತನಾಡದ ಪರಿಸ್ಥಿತಿಯಲ್ಲಿದ್ದ. ಯುವಕ ಮಿತಿ ಮೀರಿ ಮದ್ಯಪಾನ ಮಾಡಿದ್ದ ಎನ್ನಲಾಗಿದೆ.
ಮದ್ಯವ್ಯಸನಿ ಯುವಕನನ್ನು ಸಮಾಜ ಸೇವಕ ವಿಶು ಶೆಟ್ಟಿ ತಮ್ಮ ವಾಹನದಲ್ಲಿ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋಗಿದ್ದು ವೈದ್ಯರು ಪರೀಕ್ಷಿಸುವ ಸಂದರ್ಭ ಯುವಕನಿಗೆ ಎಚ್ಚರವಾಗಿದೆ. ವೈದ್ಯರಿಗೆ ಪರೀಕ್ಷಿಸಲು ಅವಕಾಶ ನೀಡದ ಯುವಕ ಆಸ್ಪತ್ರೆಯಿಂದ ಪರಾರಿಯಾಗಿದ್ದಾನೆ. ಅದೃಷ್ಟವಶಾತ್ ಫ್ಲೈ ಓವರ್ ಮೇಲಿಂದ ಕೆಳಕ್ಕೆ ಬೀಳುವಾಗ ಡಿವೈಡರ್ ಮೇಲೆ ಬಿದ್ದಿದ್ದರಿಂದ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
Kshetra Samachara
22/09/2022 08:27 am