ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳದಲ್ಲೂ ಉಗ್ರರ ಜಾಡು; ಸ್ಥಳ ಪರಿಶೀಲನೆ ನಡೆಸಿದ ಶಿವಮೊಗ್ಗ ಪೊಲೀಸರು

ಬಂಟ್ವಾಳ: ಶಿವಮೊಗ್ಗದಲ್ಲಿ ಉಗ್ರರ ಚಟುವಟಿಕೆ ನಡೆಸುತ್ತಿರುವ ಶಂಕೆಯಲ್ಲಿ ಬಂಧಿತ ಆರೋಪಿ ಮಂಗಳೂರಿನ ಮಾಝ್ ಮುನೀರ್ ಅಹ್ಮದ್ (22)ನನ್ನು ಮಂಗಳವಾರ ಸಂಜೆ ಶಿವಮೊಗ್ಗ ಪೊಲೀಸರು ಬಂಟ್ವಾಳದ ನಾವೂರು ಸಮೀಪ ಹಲವೆಡೆ ಪರಿಶೀಲನೆ ನಡೆಸಿದರು.

ನೇತ್ರಾವತಿ ನದಿ ಕಿನಾರೆಯಲ್ಲಿ ಹಾಗೂ ಸುತ್ತಮುತ್ತಲಿನ ನಿರ್ಜನ ಪ್ರದೇಶಗಳಲ್ಲಿ ಈತ ಸ್ಫೋಟಕಗಳನ್ನು ಬಚ್ಚಿಟ್ಟಿರುವ ಶಂಕೆಯಿಂದ ಈ ಪರಿಶೀಲನೆ ನಡೆಸಲಾಗಿದೆ ಎನ್ನಲಾಗಿದೆ. ಮಂಗಳೂರಿನಿಂದ ಈತನನ್ನು ಬಂಟ್ವಾಳಕ್ಕೆ ಕರೆತಂದ ಪೊಲೀಸರು ರಾತ್ರಿವರೆಗೂ ಪರಿಶೀಲನೆ ನಡೆಸಿದರು.

ಶಂಕಿತ ಉಗ್ರ ನಿರ್ಜನ ಪ್ರದೇಶದಲ್ಲಿ ಸ್ಫೋಟದ ರಿಹರ್ಸಲ್ ನಡೆಸುತ್ತಿರುವ ಶಂಕೆ ಇದ್ದ ಕಾರಣ ಶ್ವಾನದಳ ಮತ್ತು ಸ್ಫೋಟಕ ಪತ್ತೆ ತಜ್ಞರೊಂದಿಗೆ ಪರಿಶೀಲನೆ ನಡೆಸಲಾಗಿದೆ ಎನ್ನಲಾಗಿದ್ದು, ಸ್ಥಳೀಯ ಪೊಲೀಸರು ಈ ಕುರಿತು ಮಾಹಿತಿ ನೀಡಲು ನಿರಾಕರಿಸಿದರು.

ತೀರ್ಥಹಳ್ಳಿ ಡಿವೈಎಸ್ಪಿ ಶಾಂತವೀರಯ್ಯ ಹಾಗೂ ಆಗುಂಬೆ ಪಿಎಸ್ಐ ಶಿವಕುಮಾರ್ ನೇತೃತ್ವದ ತಂಡ ಈ ಪರಿಶೀಲನೆ ನಡೆದಿದೆ. ನಾವೂರು ಗ್ರಾಮದ ಸುಲ್ತಾನ್ ಕಟ್ಟೆ, ಅಗ್ರಹಾರ ಪರಿಸರದಲ್ಲಿ ಹಾಗೂ ನದಿ ಬದಿಯ ಕೆಲವು ನಿರ್ದಿಷ್ಟ ಜಾಗಗಳಲ್ಲಿ ಈ ಪರಿಶೀಲನೆಯನ್ನು ನಡೆಸಲಾಗಿದೆ.

Edited By : Abhishek Kamoji
Kshetra Samachara

Kshetra Samachara

21/09/2022 07:53 pm

Cinque Terre

7.76 K

Cinque Terre

0

ಸಂಬಂಧಿತ ಸುದ್ದಿ