ಕುಂದಾಪುರ: ಕೋಟೆಶ್ವರ ಗ್ರಾಮದ ಕಾಮತ್ ಪೆಟ್ರೋಲ್ ಪಂಪ್ ಎದುರಿನ ಬೊಬ್ಬರ್ಯ ದೇವಸ್ಥಾನ ಬಳಿಯ ಮನೆಗೆ ರಾತ್ರಿ ವೇಳೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಬಗ್ಗೆ ಕುಂದಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ರಸನ್ನ ನಾರಾಯಣ ಆಚಾರ್ಯ ಎಂಬವರ ಮನೆಯ ಬಾಗಿಲನ್ನು ಮುರಿದು ಒಳನುಗ್ಗಿದ ಕಳ್ಳರು, ಬೆಡ್‌ರೂಂನ ಕಪಾಟಿನಲ್ಲಿದ್ದ ಚಿನ್ನದ ಲಕ್ಷ್ಮೀ ಹಾರ, ಬ್ರೇಸ್ಲೇಟ್, 4 ಬೆಳ್ಳಿಯ ಲೋಟಗಳು, 4 ಬೆಳ್ಳಿಯ ಚಮಚ ಹಾಗೂ 12,000 ರೂ. ನಗದು ಕಳವು ಮಾಡಿದ್ದಾರೆ. ಇವುಗಳ ಒಟ್ಟು ಮೌಲ್ಯ 3,66,000ರೂ. ಎಂದು ಅಂದಾಜಿಸಲಾಗಿದೆ.ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.
PublicNext
20/09/2022 08:49 am