ಬೈಂದೂರು : ಸರ್ಕಾರಿ ಪ್ರೌಢಶಾಲೆಯೊಂದರಲ್ಲಿ ಶೌಚಾಲಯಕ್ಕೆ ಮಂಜೂರಾದ ಹಣದಲ್ಲಿ ಅರ್ಧಕ್ಕರ್ಧ ಹಣ ನುಂಗಿದ ಆರೋಪ ಕೇಳಿಬಂದಿದೆ. ಬೈಂದೂರು ತಾಲೂಕಿನ ಉಪ್ಪುಂದ ಸರ್ಕಾರೀ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗದಲ್ಲಿ ಶೌಚಾಲಯ ನಿರ್ಮಾಣಕ್ಕೆಂದು ಕಳೆದ ವರ್ಷ ನಾಲ್ಕೂವರೆ ಲಕ್ಷ ರೂಪಾಯಿ ಮಂಜೂರಾಗಿತ್ತು. ಈ ನಾಲ್ಕೂವರೆ ಲಕ್ಷ ರೂಪಾಯಿ ಶೌಚಾಲಯದ ತಳಪಾಯ, ಗೋಡೆ, ಛಾವಣಿ, ಪಿಟ್ ಹೀಗೇ ಅಂದರೆ ಹೊಸದಾಗಿ ನಿರ್ಮಿಸಬೇಕಾದ ಶೌಚಾಲಯವನ್ನು ಒಳಗೊಂಡಿತ್ತು.
ಆಗ ಶಾಲೆಯ ಉಪಪ್ರಾಂಶುಪಾಲನಾಗಿದ್ದ ಸತ್ಯನಾರಾಯಣ ಜಿ. ಎಂಬಾತನಿಗೆ ಅದ್ಯಾರು ತಲೆಕೆಟ್ಟವ ಐಡಿಯಾ ಕೊಟ್ಟನೋ ಗೊತ್ತಿಲ್ಲ; ಶಾಲೆಯ ಎರಡು ಕೊಠಡಿಗಳನ್ನೇ ಇಬ್ಬಾಗಿಸಿ, ಅದೇ ಪೌಂಡೇಶನ್ನಿಗೆ ಎರಡು ಅಡ್ಡಗೋಡೆಗಳನ್ನು ನಿರ್ಮಿಸಿ ಮೇಲೆ ಅದೇ ಛಾವಣಿಯನ್ನು (ಸ್ಲ್ಯಾಬ್) ಬಳಸಿಕೊಂಡು ಎರಡೂವರೆ ಲಕ್ಷ ರೂಪಾಯಿಗಳಿಗೆ ಕಾಮಗಾರಿ ಮುಗಿಸಿ ಕೈತೊಳೆದುಕೊಂಡಿದ್ದಾರೆ.
ಇಷ್ಟೇ ಆಗಿದ್ದರೆ ಸರ್ಕಾರಕ್ಕೂ ಹಣ ಉಳೀತಿತ್ತು, ಶಾಲೆಗೂ ಹೆಸರು ಬರುತ್ತಿತ್ತು. ಆದರೆ ಗುತ್ತಿಗೆದಾರ ಹಾಗೂ ಖತರ್ನನಾಕ್ ಉಪ ಪ್ರಾಂಶುಪಾಲ ಸತ್ಯನಾರಾಯಣ ಜಿ ಸೇರಿಕೊಂಡು ಮಂಜೂರಾದ ನಾಲ್ಕೂವರೆ ಲಕ್ಷ ರೂಪಾಯಿಗಳನ್ನೂ ಡ್ರಾ ಮಾಡಿಕೊಂಡಿದ್ದಾರೆ. ಕಾಮಗಾರಿಗಿಂತ ಹೆಚ್ಚುವರಿ ಅನುದಾನ ಸುಮಾರು ಎರಡು ಲಕ್ಷ ರೂಪಾಯಿ ಎಲ್ಲಿ ಹೋಯಿತು ಎನ್ನುವ ಪ್ರಶ್ನೆ ಈಗ ಶಾಲಾ ಅಭಿಮಾನಿಗಳಲ್ಲಿ ಕಾಡುತ್ತಿದೆ. ಈ ಬಗ್ಗೆ ಸಮಗ್ರ ತನಿಖೆ ಆಗಬೇಕೆಂದು ಸಾಮಾಜಿಕ ಕಾರ್ಯಕರ್ತ ನವೀನ್ ಚಂದ್ರ ಉಪ್ಪುಂದ ಆಗ್ರಹಿಸಿದ್ದಾರೆ.
Kshetra Samachara
17/09/2022 02:52 pm