ಮುಲ್ಕಿ: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕಿನ್ನಿಗೋಳಿ ಪರಿಸರದಲ್ಲಿ ಸರಣಿ ಕಳ್ಳತನ ನಡೆದಿದೆ. ಕಿನ್ನಿಗೋಳಿಯ ಮೂರು ಕಾವೇರಿ ಬಳಿ ಜೋಸೆಫ್ ಪಿಂಟೋ ಎಂಬುವರ ಮನೆ ಹಿಂಭಾಗದ ಬಾಗಿಲು ಒಡೆದು ಒಳಗೆ ನುಗ್ಗಿದ ಕಳ್ಳರು ಕಪಾಟನ್ನು ಭಾರವಾದ ಸಾಧನದಿಂದ ಹಾನಿಗೊಳಿಸಿ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ ಏನು ಸಿಗದೆ ವಾಚ್ ಮತ್ತು ಸೆಂಟ್ ಬಾಟಲಿ ಕಳ್ಳತನ ಮಾಡಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಗುತ್ತಗಾಡು ರಸ್ತೆಯ ಕಿನ್ನಿಗೋಳಿ ಬಸ್ಸು ನಿಲ್ದಾಣದ ಸಮೀಪದ ಪುಷ್ಪ ಶೆಟ್ಟಿಯವರ ಮನೆಗೆ ಹಿಂಬಾಗಿನಿಂದ ಬಾಗಿಲು ಒಡೆದು ಒಳಗೆ ನುಗ್ಗಿದ ಕಳ್ಳರು ಕಪಾಟನ್ನು ಒಡೆದು ಜಾಲಾಡಿ ಸುಮಾರು ನಾಲ್ಕು ಸಾವಿರ ನಗದು ಕಳ್ಳತನ ಮಾಡಿದ್ದಾರೆ.
ವಿಶೇಷವೆಂದರೆ ಎರಡು ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಕಳ್ಳತನ ನಡೆದಿದ್ದು ಮನೆಯವರು ಚಿನ್ನಾಭರಣಗಳನ್ನು ಬ್ಯಾಂಕ್ ಲಾಕರ್‌ನಲ್ಲಿ ಇಟ್ಟ ಕಾರಣ ಭಾರಿ ಕಳ್ಳತನ ತಪ್ಪಿ ಹೋಗಿದೆ. ಮುಲ್ಕಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
Kshetra Samachara
16/09/2022 09:04 pm