ಪುತ್ತೂರು : ಹಿಂದೂ ಹೆಸರಿನಲ್ಲಿ ಯುವತಿಯೋರ್ವಳನ್ನು ನಂಬಿಸಿ ಪುತ್ತೂರಿಗೆ ಕರೆತಂದ ಆರೋಪದಡಿ ಅನ್ಯಕೋಮಿನ ಯುವಕನೋರ್ವನನ್ನು ಹಿಂದೂ ಸಂಘಟನೆ ಕಾರ್ಯಕರ್ತರು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.
ಕುಂದಾಪುರದ ಕೋಟಾ ನಿವಾಸಿ ಅಮೀದ್ ಎನ್ನುವ ಯುವಕ ಕೋಟೇಶ್ವರದ ಯುವತಿಗೆ ಪುತ್ತೂರಿನಲ್ಲಿ ಕೆಲಸ ಕೊಡಿಸುವ ನೆಪದಲ್ಲಿ ಕರೆತಂದಿದ್ದು, ತನ್ನನ್ನು ಅಜಿತ್ ಎನ್ನುವ ಹೆಸರಿನಲ್ಲಿ ಯುವತಿಗೆ ಹಾಗೂ ಆಕೆಯ ಮನೆಯವರಲ್ಲಿ ನಂಬಿಸಿದ್ದ ಎನ್ನುವ ಆರೋಪವಿದೆ.
ಪುತ್ತೂರಿನಲ್ಲಿ ಬಾಡಿಗೆ ಮನೆ ಮಾಡಿ, ಯುವತಿಯ ಪೋಷಕರೊಂದಿಗೆ ತಂಗಿದ್ದ ಯುವಕ, ಯುವತಿಯೊಂದಿಗೆ ಪುತ್ತೂರಿನ ಗೃಹೋಪಯೋಗಿ ವಸ್ತುಗಳನ್ನು ಮನೆ ಮನೆಗೆ ಮಾರಾಟ ಮಾಡುವ ಕೆಲಸದಲ್ಲಿ ನಿರತನಾಗಿದ್ದ. ಈ ಬಗ್ಗೆ ಮಾಹಿತಿ ಪಡೆದ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಯುವಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಆದರೆ ಯುವತಿ ತಪ್ಪಿಸಿಕೊಂಡಿದ್ದು, ಪುತ್ತೂರು ನಗರ ಪೊಲೀಸರು ಯುವತಿಯನ್ನು ಸಂಪರ್ಕಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಘಟನೆಯ ಹಿನ್ನಲೆಯಲ್ಲಿ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಪುತ್ತೂರು ನಗರ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಜಮಾಯಿಸಿದ್ದರು.
PublicNext
16/09/2022 03:38 pm